KLE1099 Add

ಪೈಶಾಚಿಕ ಕೃತ್ಯಕ್ಕೆ ಬೆಚ್ಚಿಬಿದ್ದ ಜಿಲ್ಲೆಯ ಜನತೆ; ತಾಯಿಯನ್ನೇ ಅತ್ಯಾಚಾರಗೈದ ಮಗ

ಬಾಯಿಗೆ ಬಟ್ಟೆ ತುರುಕಿ ಕೊಲೆ ಬೆದರಿಕೆಯೊಡ್ಡಿ ಕೃತ್ಯ

Beereshwara 6

ಪ್ರಗತಿವಾಹಿನಿ ಸುದ್ದಿ; ಮಂಗಳೂರು: ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ಬೆಳಕಿಗೆ ಬಂದಿದೆ. ಮಗನೆ ತಾಯಿಯ ಮೇಲೆ ಅತ್ಯಾಚಾರವೆಸಗಿರುವ ನೀಚ ಕೃತ್ಯ ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ಕುರಿಕ್ಕಾರದಲ್ಲಿ ನಡೆದಿದೆ.

35 ವರ್ಷದ ಜಯರಾಮ ರೈ ತನ್ನ 58 ವರ್ಷದ ತಾಯಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಸಂತ್ರಸ್ತ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪತ್ನಿ ಸೀಮಂತಕ್ಕೆ ತವರು ಮನೆಗೆ ತೆರಳಿದ್ದು ಈ ವೇಳೆ ತಾಯಿಯ ಮೇಲೆಯೇ ಮಗ ನಿರಂತರವಾಗಿ ಅತ್ಯಾಚಾರವೆಸಗಿದ್ದಾನೆ.

ಬೊಬ್ಬೆ ಹೊಡೆಯದಂತೆ ಬೆದರಿಕೆಯೊಡ್ಡಿ ಬಾಯಿಗೆ ಬಟ್ಟೆ ತುರುಕಿ ಕೃತ್ಯವೆಸಗಿದ್ದಲ್ಲದೇ, ವಿಷಯ ಬಾಯ್ಬಿಟ್ಟರೆ ಕೊಲೆ ಮಾಡುವುದಾಗಿ ಬೆದರಿಸಿದ್ದಾನೆ ಎಂದು ತಿಳಿದುಬಂದಿದೆ.

ಮನೆಯಲ್ಲಿ ತಾಯಿ ಹಾಗೂ ಮಗ ಇಬ್ಬರೆ ವಾಸವಾಗಿದ್ದರು. ಜನವರಿ 12ರಂದು ತಡರಾತ್ರಿ ಹಾಗೂ ಮರುದಿನ ಬೆಳಿಗ್ಗೆ ಮಗನೆ ತಾಯಿ ಮೇಲೆ ಪೈಶಾಚಿಕ ಕೃತ್ಯವೆಸಗಿದ್ದಾನೆ. ಸಂತ್ರಸ್ತ ಮಹಿಳೆ ಪುತ್ತೂರು ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ಆರೋಪಿ ಜಯರಾಮ್ ರೈ ನನ್ನು ಬಂಧಿಸಿರುವ ಪೊಲೀಸರು ಐಪಿಸಿ ಸೆಕ್ಷನ್ 376 (ಎನ್), 506 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ವಿಷಾಹಾರ ಸೇವನೆ; ಆಸ್ಪತ್ರೆಗೆ ದಾಖಲಾದ 50 ಮಕ್ಕಳು

You cannot copy content of this page