Beereshwara add 5
Crease wise add 8
KLE1099 Add

ಕೋವಿಡ್ ನಿರ್ವಹಣೆಯಲ್ಲಿ ಭ್ರಷ್ಟಾಚಾರ; ಜೈಲುಶಿಕ್ಷೆಗೆ ಗುರಿಯಾದ ಸಚಿವ

12 ವರ್ಷ ಜೈಲುಶಿಕ್ಷೆ ವಿಧಿಸಿದ ಕೋರ್ಟ್

ಪ್ರಗತಿವಾಹಿನಿ ಸುದ್ದಿ; ಜಕಾರ್ತ: ಕೊರೊನಾ ಸೋಂಕು ನಿರ್ವಹಣೆಯಲ್ಲಿ ಭ್ರಷ್ಟಾಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಸಚಿವ ಜ್ಯೂಲಿಯಾರಿ ಬಾಟುಬಾರ ಅವರಿಗೆ ಇಂಡನೋಷ್ಯಾ ನ್ಯಾಯಾಲಯ 12 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಕೋವಿಡ್ ನಿರ್ವಹಣೆಗಾಗಿ ಬರೋಬ್ಬರಿ 2.25 ಮಿಲಿಯನ್ ಡಾಲರ್ ಹಣವನ್ನು ಜ್ಯೂಲಿಯಾರಿ ಬಾಟುಬಾರ ಲಂಚವಾಗಿ ಪಡೆದುಕೊಂಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಇದೀಗ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಶಿಕ್ಷೆ ಪ್ರಮಾಣ ಪ್ರಕಟಿಸಿದೆ.

ಇನ್ನು 12 ವರ್ಷ ಜೈಲುಶಿಕ್ಷೆ ಅನುಭವಿಸಿದ ಬಳಿಕ ಮತ್ತೆ ನಾಲ್ಕು ವರ್ಷಗಳ ಕಾಲ ಸಚಿವ ಸ್ಥಾನ ಸೇರಿದಂತೆ ಯಾವುದೇ ಹುದ್ದೆ, ಪದವಿ ಪಡೆಯುವಂತಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.

ಡ್ರಗ್ಸ್ ಪ್ರಕರಣ; ಸ್ಯಾಂಡಲ್ ವುಡ್ ನಟಿಯರ ಸ್ಫೋಟಕ ಸತ್ಯ ಬಯಲು