Advertisement -Home Add

ಮತ್ತೋರ್ವ ಶಾಸಕರಿಗೂ ಕೊರೊನಾ ದೃಢ

ಶಾಸಕ ಹರತಾಳು ಹಾಲಪ್ಪಗೆ ಕೊವಿಡ್ ಪಾಸಿಟೀವ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ, ಸಚಿವರಾದ ಬಿ ಸಿ ಪಾಟೀಲ್, ಆನಂದ್ ಸಿಂಗ್ ಸೇರಿದಂತೆ ರಾಜ್ಯದ ಹಲವು ರಾಜಕೀಯ ಘಟಾನುಘಟಿಗಳಿಗೆ ಕೊರೊನಾ ಸೋಂಕು ತಗುಲಿದ್ದು, ಇದೀಗ ಶಾಸಕ ಹರತಾಳು ಹಾಲಪ್ಪ ಅವರಿಗೂ ಕೊರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನಲೆಯಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಈ ಕುರಿತು ಸ್ವತ: ಶಾಸಕರೇ ಫೇಸ್ಬುಕ್​​​ನಲ್ಲಿ ಪೇಜ್ ನಲ್ಲಿ ತಿಳಿಸಿದ್ದು, ತಮಗೆ ಹಾಗೂ ಪತ್ನಿ ಮತ್ತು ತಮ್ಮ ಕಾರು ಚಾಲಕ, ಓರ್ವ ಸಿಬ್ಬಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢವಾಗಿದೆ. ತಮ್ಮೊಂದಿಗೆ ಸಂಪರ್ಕಕ್ಕೆ ಬಂದ ಎಲ್ಲರೂ ಕೂಡಲೇ ಐಸೊಲೇಷನ್ ಆಗಬೇಕು ಹಾಗೂ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಯಡಿಯೂರಪ್ಪ, ಮಾಜಿ ಸಚಿವರು, ಸಾಗರ ಕ್ಷೇತ್ರದ ಜನಪ್ರಿಯ ಶಾಸಕ ಹರತಾಳು ಹಾಲಪ್ಪನವರು ಮತ್ತು ಅವರ ಪತ್ನಿ ಕೊರೊನಾ ಸೋಂಕಿನಿಂದ ಬೇಗನೆ ಗುಣಮುಖರಾಗಲಿ, ಸಂಪೂರ್ಣವಾಗಿ ಚೇತರಿಸಿಕೊಂಡು ಮತ್ತೆ ಎಂದಿನಂತೆ ಕಾರ್ಯಪ್ರವೃತ್ತರಾಗಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.