Advertisement -Home Add
Crease wise New Design
Jarkiholi Parents Add

ಇಡೀ ತಾಲೂಕಿಗೆ ಆವರಿಸಿದ ಕೊರೊನಾ ಕರಿನೆರಳು

ಶಾಸಕ, ತಹಶೀಲ್ದಾರ್ ರಿಂದ ಹಿಡಿದು ಪತ್ರಕರ್ತರವರೆಗೂ ಎಲ್ಲರೂ ಕ್ವಾರಂಟೈನ್

ಪ್ರಗತಿವಾಹಿನಿ ಸುದ್ದಿ; ಮೈಸೂರು: ರಾಜ್ಯದಲ್ಲಿ ಕೊರೊನಾ ಮಹಾಮಾರಿಯ ರುದ್ರ ನರ್ತನ ದಿನೇ ದಿನೇ ಹೆಚ್ಚುತ್ತಿದ್ದು, ಸೋಂಕು ನಿಯಂತ್ರಣಕ್ಕೆ ಸರ್ಕಾರ ಎಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಾಗದ ಸ್ಥಿತಿ ತಲುಪುತ್ತಿದೆ. ಈ ನಡುವೆ ಮೈಸೂರಿನ ಹೆಚ್‌.ಡಿ.ಕೋಟೆಯಲ್ಲಿ ಶಾಸಕ, ತಹಶೀಲ್ದಾರ್, ಪೊಲೀಸ್ ಸಿಬ್ಬಂದಿಗಳು, ಅಧಿಕಾರಿಗಳು, ಪತ್ರಕರ್ತರು ಸೇರಿ ಎಲ್ಲರೂ ಕ್ವಾರಂಟೈನ್ ಆದ ಘಟನೆ ನಡೆದಿದೆ.

ಹೆಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಪೊಲೀಸ್ ಅಧಿಕಾರಿಗೆ ಕೊರೋನಾ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಕ್ಷೇತ್ರದ ಶಾಸಕ ಅನಿಲ್‌ ಚಿಕ್ಕಮಾದು, ತಹಸೀಲ್ದಾರ್ ಆರ್.ಮಂಜುನಾಥ್, 20 ಮಂದಿ ಪೊಲೀಸ್ ಸಿಬ್ಬಂದಿ, 6 ಮಂದಿ ಪತ್ರಕರ್ತರು, 10 ಮಂದಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಸೇರಿ 106 ಮಂದಿ ಹೋಂ ಕ್ವಾರಂಟೈನ್ ಆಗಿದ್ದಾರೆ.ಎಲ್ಲರ ಗಂಟಲು ದ್ರವದ ಸ್ಯಾಂಪಲ್‌ ಪಡೆಯಲಾಗಿದ್ದು, ಪರೀಕ್ಷೆಗೆ ಕಳುಹಿಸಲಾಗಿದೆ.

ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸೋಂಕಿತ ಪೊಲೀಸ್ ಅಧಿಕಾರಿಯಿಂದ ಇಷ್ಟೆಲ್ಲ ಅನಾವುತ ಆಗಿದ್ದು, ಇದೀಗ ಇಡೀ ತಾಲ್ಲೂಕು ಆಡಳಿತಕ್ಕೆ ಸೋಂಕಿನ ಭೀತಿ ಎದುರಾಗಿದೆ. ಸೋಂಕು ನಿಯಂತ್ರಣ ಮಾಡುತ್ತಿದ್ದವರೆಲ್ಲ ಈಗ ಕ್ವಾರಂಟೈನ್​ಗೆ ಒಳಗಾಗಿದ್ದು, ಇಡೀ ತಾಲ್ಲೂಕಿಗೆ ಕೊರೋನಾ ಗ್ರಹಣ ಹಿಡಿದಂತಾಗಿದೆ.