Advertisement -Home Add
Chandargi Sports School
Wanted Home Add

ರಾಮ ನೇಪಾಲಿ ಎಂದು ಹೊಸ ಕ್ಯಾತೆ ತೆಗೆದ ನೇಪಾಳ ಪ್ರಧಾನಿ ಓಲಿ

ಅಯೋಧ್ಯೆಯಿರುವುದು ಭಾರತದಲ್ಲಲ್ಲ ಎಂದೂ ವಾದ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಚೀನಾ ಕ್ಯಾತೆ ತೆಗೆಯುತ್ತಿರುವ ಬೆನ್ನಲ್ಲೇ ಇತ್ತೀಚಿನ ದಿನಗಳಲ್ಲಿ ನೇಪಾಳ ಕೂಡ ಒಂದಿಲ್ಲೊಂದು ವಿಚಾರಕ್ಕೆ ಕ್ಯಾತೆ ಆರಂಭಿಸಿದೆ. ಇದೀಗ ರಾಮ ಭಾರತೀಯನಲ್ಲ ನೇಪಾಳಿ ಎಂದು ಹೇಳುವ ಮೂಲಕ ಹೊಸ ಜಗಳ ಶುರುಮಾಡಿದೆ.

ನೇಪಾಳದ ಕವಿ ಭಾನುಭಕ್ತ ಅವರ ಜನ್ಮದಿನದ ಅಂಗವಾಗಿ ಅಲ್ಲಿನ​ ಪ್ರಧಾನಿ ಕೆಪಿ ಶರ್ಮಾ ಓಲಿ ಅವರ ಮನೆಯಲ್ಲಿ ಕಾರ್ಯಕ್ರಮವೊಂದನ್ನು ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಸಾಂಸ್ಕೃತಿಕವಾಗಿ ಅತಿಕ್ರಮಣಕ್ಕೆ ಒಳಪಟ್ಟಿದ್ದೇವೆ. ನಮ್ಮಲ್ಲಿ ಇತಿಹಾಸವನ್ನೇ ತಿರುಚಲಾಗಿದೆ. ರಾಮ ನೇಪಾಳಿ. ಅವರು ಭಾರತೀಯನಲ್ಲವೇ ಅಲ್ಲ. ಅಯೋಧ್ಯೆ ಇರುವುದು ಭಾರತದಲ್ಲಲ್ಲ ನಮ್ಮಲ್ಲಿ ಎಂದು ಹೇಳುವ ಮೂಲಕ ಹೊಸ ಕ್ಯಾತೆ ತೆಗೆದಿದ್ದಾರೆ. “ನಾವು ರಾಮಾಯಣವನ್ನು ನಂಬುತ್ತೇವೆ. ಅಯೋಧ್ಯೆಯಲ್ಲಿ ರಾಮ-ಸೀತೆ ಮದುವೆ ಆದರು ಎಂಬುದು ನಮ್ಮ ನಂಬಿಕೆಯೇ. ಆದರೆ, ಅಯೋಧ್ಯೆ ಇರುವುದು ಬಿರ್ಗುಂಜ್​ ಭಾಗದಲ್ಲಿ. ಭಾರತ ಮಾತ್ರ ಅಯೋಧ್ಯೆ ಉತ್ತರ ಪ್ರದೇಶದಲ್ಲಿದೆ ಎಂದು ಹೇಳುತ್ತಿದೆ ಎಂದಿದ್ದಾರೆ.

ವಾಲ್ಮಿಕಿ ಆಶ್ರಮ ನೇಪಾಳದಲ್ಲಿದೆ. ದಶರಥ ನೇಪಾಳದ ಆಡಳಿತ ನಡೆಸಿದ್ದರು. ಹೀಗಾಗಿ ರಾಮ ಕೂಡ ನೇಪಾಳದಲ್ಲೇ ಜನಿಸಿದ್ದಾರೆ. ಈ ಎಲ್ಲ ಕಾರಣಕ್ಕೆ ಅವರು ನಮ್ಮ ದೇಶದವರು ಎಂದು ಓಲಿ ಹೇಳಿದ್ದಾರೆ.

ಈಗಾಗಲೇ ನೇಪಾಳ ಕೇಬಲ್ ಆಪರೇಟರ್ ಗಳು ಭಾರತದ ನ್ಯೂಸ್ ಚಾನಲ್ ಗಳನ್ನು ಪ್ರಸಾರ ಮಾಡುವುದನ್ನು ನಿಲ್ಲಿಸಿದ್ದು, ಡಿಡಿ ನ್ಯೂಸ್​ ಚಾನೆಲ್​ ಹೊರತುಪಡಿಸಿ ಉಳೆದ ಎಲ್ಲ ಸುದ್ದಿ ವಾಹಿನಿಗಳನ್ನು ಬ್ಯಾನ್​ ಮಾಡಲಾಗಿದೆ.