Yoga add Final 1
KLE1099 Add

ಫುಲ್ವಾಮಾದಲ್ಲಿ ನಡೆಯಿತು ಮತ್ತೊಂದು ದಾಳಿ; ಓರ್ವನ ಸಾವು, ಇಬ್ಬರಿಗೆ ಗಾಯ

ಆರ್ಟಿಕಲ್ 37 ತೆರವು ವರ್ಷಾಚರಣೆ ಮುನ್ನಾ ದಿನ ಕೃತ್ಯ

GIT Add 3
Beereshwara add 12

ಪ್ರಗತಿವಾಹಿನಿ ಸುದ್ದಿ, ಶ್ರೀನಗರ: ಕಾಶ್ಮೀರ ಕಣಿವೆಯ ಫುಲ್ವಾಮಾದಲ್ಲಿ ಮತ್ತೊಂದು ಭಯೋತ್ಪಾದಕ ದಾಳಿ ನಡೆದಿದೆ.

ಗುರುವಾರ ಉಗ್ರರು ನಡೆಸಿದ ಗ್ರೆನೇಡ್ ದಾಳಿಯಲ್ಲಿ ಬಿಹಾರದ ಓರ್ವ ಕಾರ್ಮಿಕ ಮೃತಪಟ್ಟಿದ್ದು ಇಬ್ಬರು ಗಾಯಗೊಂಡಿದ್ದಾರೆ.

ಮೃತನ್ನು ಸಾಕ್ವಾಪಾರ್ಸಾ ನಿವಾಸಿ ಮೊಹಮ್ಮದ್ ಮುಮ್ತಾಜ್ ಎಂದು ಗುರುತಿಸಲಾಗಿದೆ. ರಾಂಪುರ ನಿವಾಸಿಗಳಾದ ಮೊಹಮ್ಮದ್ ಅರಿಫ್ ಹಾಗೂ ಮೊಹಮ್ಮದ್ ಮಜ್ಬೂಲ್ ಗಾಯಗೊಂಡವರು.

2019ರ ಆಗಸ್ಟ್ 5ರಂದು ಕೇಂದ್ರ ಸರಕಾರ ಕಾಶ್ಮೀರದಲ್ಲಿ ಜಾರಿಯಿದ್ದ ಆರ್ಟಿಕಲ್ 370 ತೆರವುಗೊಳಿಸಿತ್ತು. ಅದರ ವಾರ್ಷಿಕೋತ್ಸವ ಆಚರಣೆಯ ಮುನ್ನಾ ದಿನವೇ ಉಗ್ರರು ಈ ದುಷ್ಕೃತ್ಯ ಎಸಗಿದ್ದಾರೆ.

2019ರ ಫೆ.14ರಂದು  ಫುಲ್ವಾಮಾದಲ್ಲಿ ಉಗ್ರರು ದಾಳಿ ನಡೆಸಿ ಭಾರತೀಯ ಸೇನಾಪಡೆಯ ಹಲವು ಸೈನಿಕರ ಸಾವು ನೋವಿಗೆ ಕಾರಣವಾಗಿದ್ದನ್ನಿಲ್ಲಿ ಸ್ಮರಿಸಬಹುದು.

ಮಂಕಿಪಾಕ್ಸ್: ಆರೋಗ್ಯದ ತುರ್ತು ಪರಿಸ್ಥಿತಿ ಘೋಷಿಸಿದ ಅಮೆರಿಕ

Home add- Bottom