Advertisement -Home Add

ಗಾಯಗೊಂಡಿದ್ದ ಯೋಧರನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಿದ ಪ್ರಧಾನಿ

ಭಾರತ-ಚೀನಾ ಸಂಘರ್ಷದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಯೋಧರು

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಭಾರತ-ಚೀನಾ ಗಡಿ ಪ್ರದೇಶ ಲಡಾಖ್ ನ ಗಲ್ವಾನ್ ನಲ್ಲಿ ಉಭಯ ದೇಶಗಳ ಸೈನಿಕರ ನಡುವೆ ನಡೆದ ಘರ್ಷಣೆಯಲ್ಲಿ ಗಾಯಗೊಂಡಿದ್ದ ಭಾರತೀಯ ಯೋಧರನ್ನು ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ ಧೈರ್ಯ ತುಂಬಿದ್ದಾರೆ.

ಜೂನ್ 15 ರಂದು ನಡೆದಿದ್ದ ಗಲ್ವಾನ್ ಘರ್ಷಣೆಯಲ್ಲಿ ಗಾಯಗೊಂಡಿದ್ದ ಭಾರತೀಯ ಯೋಧರಿಗೆ ಲೇಹ್‍ನ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ಭೇಟಿ ನೀಡಿದ್ದ ಪ್ರಧಾನಿಗಳು ಪ್ರತಿಯೊಬ್ಬ ಯೋಧರ ಬಳಿಗೆ ತೆರಳಿ ಸ್ವತಃ ಯೋಗಕ್ಷೇಮ ವಿಚಾರಿಸಿದರು.

ಯೋಧರ ಶೌರ್ಯ, ಬಲಿದಾನವನ್ನು ಇಡೀ ದೇಶ ನೋಡಿದೆ. ದೇಶದ ಪ್ರತಿ ಜನತೆಗೂ ನಿಮ್ಮ ಸಾಹಸ ಸ್ಫೂರ್ತಿ. ನಮ್ಮ ದೇಶ ಜಗತ್ತಿನ ಯಾವುದೇ ಶಕ್ತಿ ಎದುರು ತಲೆಬಾಗುವುದಿಲ್ಲ. ನಿಮ್ಮಂತಹ ಧೈರ್ಯಶಾಲಿಗಳ ಕಾರಣದಿಂದಾಗಿ ನಾನು ಇದನ್ನು ಹೇಳಲು ಸಮರ್ಥವಾಗಿದ್ದೇನೆ ಎಂದು ಹೇಳಿದರು.