Yoga add Final 1
KLE1099 Add

ಬಿಜೆಪಿ ಸರಕಾರ ಬಸವ ತತ್ವಗಳಿಗೆ ವ್ಯತಿರಿಕ್ತ: ರಾಹುಲ್ ಗಾಂಧಿ

ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ ಸಮಾರಂಭ

GIT Add 3
Beereshwara add 12

ಪ್ರಗತಿವಾಹಿನಿ ಸುದ್ದಿ, ದಾವಣಗೆರೆ: ಬಿಜೆಪಿ ಸರಕಾರ ಬಸವಣ್ಣನವರ ತತ್ವಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಕಾಂಗ್ರೆಸ್ ರಾಷ್ಟ್ರೀಯ ಮುಖಂಡ ರಾಹುಲ್ ಗಾಂಧಿ ಹೇಳಿದರು.

ಅವರು ದಾವಣಗೆರೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ 75ನೇ ಜನ್ಮದಿನದ ನಿಮಿತ್ತ ಬುಧವಾರ ಆಯೋಜಿಸಿದ್ದ  ‘ಸಿದ್ದರಾಮೋತ್ಸವ’ ಕಾರ್ಯಕ್ರಮ ಉದ್ಘಾಟಿಸಿ ಸಿದ್ದರಾಮಯ್ಯ ಅವರಿಗೆ ಶುಭ ಹಾರೈಸಿ ಮಾತನಾಡಿದರು.

ಬಸವಣ್ಣನವರ ಪ್ರತಿಮೆ ಮುಂದೆ ಪ್ರತಿಜ್ಞೆ ಮಾಡಿದ ಬಿಜೆಪಿಗರು ಈಗ ಅದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಬಸವಣ್ಣನವರು ಪ್ರಾಮಾಣಿಕರಾಗಿರಿ ಎಂದಿದ್ದರು. ಆದರೆ ಬಿಜೆಪಿಗರು ಭ್ರಷ್ಟಾಚಾರದಲ್ಲಿ ತೊಡಗುವ ಮೂಲಕ ತದ್ವಿರುದ್ಧವಾಗಿದ್ದಾರೆ ಎಂದರು.

”ಸಿದ್ದರಾಮಯ್ಯ ಅವರ ಮೇಲೆ ನನಗೆ ವಿಶೇಷ ಗೌರವವಿದೆ. ಅವರು ಕರ್ನಾಟಕದಲ್ಲಿ ನಡೆಸಿದ ಸರಕಾರ ಮಾದರಿಯಾಗಿತ್ತು. ಸಮಾಜದ ಬಡವರು, ನೊಂದವರು, ದುರ್ಬಲರ ಪರ ಻ವರ ದೃಷ್ಟಿಕೋನದ ಬಗ್ಗೆ ಅಭಿಮಾನವಿದೆ. ಆದರೆ ಇಂದಿನ ಬಿಜೆಪಿ ಸರಕಾರ ಅದಕ್ಕೆ ಸಂಪೂರ್ಣ ವ್ಯತಿರಿಕ್ತವಾಗಿದೆ. ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಏಕತೆ, ಸಾಮರಸ್ಯವಿತ್ತು. ಈಗ ಬಿಜೆಪಿ ಅದನ್ನು ಒಡೆಯುವ ಕೆಲಸ ಮಾಡುತ್ತಿದೆ ಬಿಜೆಪಿ ಆಡಳಿತದಲ್ಲಿ ಕರ್ನಾಟಕದಲ್ಲಿ ಉಂಟಾದಷ್ಟು ಅಭದ್ರತೆಯ ವಾತಾವರಣ ಯಾವತ್ತೂ ಆಗಿಲ್ಲವೆಂಬ ಅಭಿಪ್ರಾಯ ಅಮೆರಿಕದಲ್ಲಿರುವ ಅನಿವಾಸಿ ಭಾರತೀಯರವರೆಗೂ ಉದ್ಗರಿಸುವಂತಾಗಿದೆ ಎಂದು ಅವರು ಹೇಳಿದರು.

ಅನ್ನಭಾಗ್ಯ, ಶಾದಿಭಾಗ್ಯ ಸೇರಿದಂತೆ ಹಲವು ಭಾಗ್ಯಗಳು, ಇಂದಿರಾ ಕ್ಯಾಂಟೀನ್ ನಂಥ ಯೋಜನೆಗಳನ್ನು ಸಿದ್ದರಾಮಯ್ಯನವರು ತಮ್ಮ ಆಡಳಿತದಲ್ಲಿ ನೀಡಿದ್ದಾರೆ. ಆದರೆ ಬಿಜೆಪಿ ಸರಕಾರ ಸಮಾಜದಲ್ಲಿ ಒಡಕು ಸೃಷ್ಟಿಸಿ ಅಧಿಕಾರ ಮಾಡುತ್ತಿದೆ ಎಂದರು.

ಕೇಂದ್ರ ಸರಕಾರದ ಮೇಲೂ ಹರಿಹಾಯ್ದ ರಾಹುಲ್ ನೋಟ್ ಬ್ಯಾನ್ ಮತ್ತು ಜಿಎಸ್ ಟಿ ದೇಶದ ಅತ್ಯಂತ ದೊಡ್ಡ ದುರಂತಗಳು ಎಂದೇ ಜನಸಾಮಾನ್ಯರು ಹೇಳುತ್ತಿದ್ದಾರೆ. ಕಾಂಗ್ರೆಸ್ ಸರಕಾರ ನರೇಗಾದಂಥ ಅನೇಕ ಯೋಜನೆಗಳನ್ನು ನೀಡಿದೆ. ಆದರೆ ಪ್ರಧಾನಿಗೆ ಆಪ್ತರಾದ ಕೆಲವೇ ಕೆಲವು ಉದ್ಯಮಿಗಳಿಗೆ ನೆರವಾಗುವ ರೀತಿಯಲ್ಲಿ ಕೇಂದ್ರದ ಬಿಜೆಪಿ ಸರಕಾರ ನಡೆಯುತ್ತಿದೆ ಎಂದರು.

ಕರ್ನಾಟಕದಲ್ಲಿ ಮತ್ತೆ ಗೆಲುವು ಪಡೆದು ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಬದ್ಧವಾಗಿದೆ ಎಂದ ಅವರು, ಸಿದ್ದರಾಮಯ್ಯ ಅವರಿಗೆ ಶುಭ ಹಾರೈಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ಬಿ.ಕೆ. ಹರಿಪ್ರಸಾದ, ಕೆ.ಸಿ.ವೇಣುಗೋಪಾಲ, ಆರ್.ವಿ. ದೇಶಪಾಂಡೆ, ಜಮೀರ್ ಅಹಮ್ಮದ್ ಖಾನ್,  ಲಕ್ಷ್ಮೀ ಹೆಬ್ಬಾಳಕರ ಸೇರಿದಂತೆ ಹಲವು ಗಣ್ಯರು ಸಿದ್ದರಾಮಯ್ಯ ಅವರಗೆ ಶುಭ ಹಾರೈಸಿದರು.

ರಾಜ್ಯುದ ನಾನಾ ಮೂಲೆಗಳಿಂದ ಲಕ್ಷಾಂತರ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಕಾರ್ಮಯಕ್ರಮಕ್ಕೆ ಆಗಮಿಸಿದ್ದರು.

ಸಿದ್ದರಾಮಯ್ಯ ಜನ್ಮ ದಿನದಂದೇ ರಾಜಕೀಯ ನಿವೃತ್ತಿ ಘೋಷಣೆ ಮಾಡಲಿ – ಅಶ್ವತ್ಥನಾರಾಯಣ; ಡಾ.ಪ್ರಭಾಕರ ಕೋರೆಗೆ ಉನ್ನತ ಸ್ಥಾನಗಳು ಸಿಗಲಿ

Home add- Bottom