Crease wise (28th Jan)
KLE1099 Add

ಸಿದ್ದರಾಮಯ್ಯಗೆ ತಿರುಗೇಟು ನೀಡಿದ ಪಾಲಿಮಾರು ಶ್ರೀ

ಜನನಾಯಕರು ಚಂಬಲ್ ಕಣಿವೆ ಡಕಾಯಿತರಿಗಿಂತಲೂ ಹೆಚ್ಚು ಕಷ್ಟ ಕೊಡುತ್ತಿದ್ದಾರೆ ಎಂದು ಗುಡುಗು

Anand Ads 3 (3)

ಪ್ರಗತಿವಾಹಿನಿ ಸುದ್ದಿ; ಉಡುಪಿ: ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ವಿಚಾರವಾಗಿ ಮಾತನಾಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ, ವಿವಾದಿತ ಮಂದಿರಕ್ಕೆ ದೇಣಿಗೆ ನೀಡಲ್ಲ ಎಂಬ ಹೇಳಿಕೆ ನೀಡಿದ್ದರು, ವಿಪಕ್ಷ ನಾಯಕನ ಈ ಹೇಳಿಕೆಗೆ ತಿರುಗೇಟು ನೀಡಿರುವ ಪಾಲಿಮಾರು ವಿದ್ಯಾಧೀಶ ಶ್ರೀಗಳು ಜನನಾಯಕರು ಚಂಬಲ್ ಕಣಿವೆ ಡಕಾಯಿತರಿಗಿಂತ ಡೇಂಜರ್ ಎಂದು ಗುಡುಗಿದ್ದಾರೆ.

ಉಡುಪಿಯಲ್ಲಿ ಮಾತನಾಡಿದ ಶ್ರೀಗಳು, ರಾಮ ಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ನ ಐವರು ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. ಮಂದಿರ ಇದ್ದ ಬಗ್ಗೆ ಎಲಾ ಪುರಾವೆ, ಸಾಕ್ಷ್ಯಗಳನ್ನು ಭೂಗರ್ಭದಿಂದ ಪಡೆದು ಪರಿಶೀಲಿಸಲಾಗಿದೆ. ಐದು ನ್ಯಾಯಮೂರ್ತಿಗಳು ಅದರಲ್ಲೂ ಓರ್ವ ಮುಸ್ಲೀಂ ಸಮುದಾಯದ ನ್ಯಾಯಮೂರ್ತಿಗಳು ಕೂಡ ಇದ್ದರು ಎಲ್ಲರೂ ಸೇರಿ ತೀರ್ಪು ನೀಡಿದ್ದಾರೆ. ಹಾಗಿರುವಾಗ ಓರ್ವ ವಕೀಲರಾಗಿದ್ದ ಜನನಾಯಕರೊಬ್ಬರು ರಾಮ ಮಂದಿರ ವಿವಾದಿತ ಭೂಮಿ ಎಂದು ಹೇಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು.

ರಾಮ ಮಂದಿರ ವಿವಾದಿತ ಭೂಮಿಯಲ್ಲ. ನ್ಯಾಯಾಲಯವೇ ತೀರ್ಪು ನೀದಿರುವಾಗ ಇನ್ನೂ ವಿವಾದಿತ ಎಂಬ ಪದ ಪ್ರಯೋಗ ಸರಿಯಲ್ಲ ಎಂದಿರುವ ಶ್ರೀಗಳು, ಇಂದು ಜನನಾಯಕರು ಚಂಬಲ್ ಕಣಿವೆ ಡಕಾಯಿತರಿಗಿಂತಲೂ ಹೆಚ್ಚು ಕಷ್ಟಗಳನ್ನು ಕೊಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.