GIT add 2024-1
Laxmi Tai add
Beereshwara 33

ಬೇರೆ ಜಿಲ್ಲೆಯವರಿಗೇಕೆ ಬೆಳಗಾವಿ ಉಸ್ತುವಾರಿ? – ರಮೇಶ್ ಕತ್ತಿ ತೀವ್ರ ಅಸಮಾಧಾನ

ಈ ನಾಲ್ವರು ಜಿಲ್ಲಾ ಉಸ್ತುವಾರಿಗೆ ಅಸಮರ್ಥರಿದ್ದಾರೆ ಎಂಬ ಅನುಮಾನ ಮೂಡುತ್ತಿದೆ

Anvekar 3
Cancer Hospital 2

ಈ ನಾಲ್ವರು ಜಿಲ್ಲಾ ಉಸ್ತುವಾರಿಗೆ ಅಸಮರ್ಥರಿದ್ದಾರೆ ಎಂಬ ಅನುಮಾನ ಮೂಡುತ್ತಿದೆ

 

ಪ್ರಗತಿವಾಹಿನಿ ಸುದ್ದಿ, ಸಂಕೇಶ್ವರ : ಬೆಳಗಾವಿ ಜಿಲ್ಲೆಯಲ್ಲಿ ಮೂವರು ಸಚಿವರು, ಓರ್ವ ಉಪಮುಖ್ಯಮಂತ್ರಿ ಇದ್ದರೂ ಬೇರೆ ಜಿಲ್ಲೆಯವರಿಗೆ ಬೆಳಗಾವಿ ಉಸ್ತುವಾರಿ ಸಚಿವ ಸ್ಥಾನ ನೀಡಿರುವುದು ಜಿಲ್ಲೆಯ ಜನರಲ್ಲಿ ಗೊಂದಲವನ್ನುಂಟು ಮಾಡುತ್ತಿದೆ ಎಂದು ಮಾಜಿ ಸಂಸದ ಹಾಗೂ ಬೆಳಗಾವಿ ಡಿಸಿಸಿ ಬ್ಯಾಂಕಿನ ಅಧ್ಯಕ್ಷ ರಮೇಶ ಕತ್ತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಹಿರಿಯರಾದ ಗೋವಿಂದ ಕಾರಜೋಳ ಅವರ ಬಗೆಗೆ ವಯಕ್ತಿಕವಾಗಿ ಯಾವುದೇ ಅಪಸ್ವರವಿಲ್ಲ. ಆದರೆ ಬೆಳಗಾವಿ ಜಿಲ್ಲೆ ರಾಜ್ಯದ ಅತಿದೊಡ್ಡ ಜಿಲ್ಲೆಯಾಗಿದ್ದು, ೧೮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸರಕಾರ ಈಗಾಗಲೇ ನಾಲ್ಕು ಜನ ಸರಕಾರದ ಸಂಪುಟದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಪದೇ ಪದೇ ಜಿಲ್ಲೆಯವರನ್ನು ಬಿಟ್ಟು ಬೇರೆಯವರಿಗೆ ಉಸ್ತುವಾರಿ ನೀಡುತ್ತಿರುವುದರಿಂದ ಈಗಿರುವ ಸಚಿವರ ಬಗೆಗೆ ಜನರಲ್ಲಿ ತಪ್ಪು ಕಲ್ಪನೆ ಮೂಡುತ್ತಿದೆ. ನನ್ನ ಅಣ್ಣ ಉಮೇಶ ಕತ್ತಿ ಅವರಿಗೆ ಉಸ್ತುವಾರಿ ನೀಡಲು ನನ್ನ ಅಸಮಾಧಾನ ಹೊರಹಾಕುತ್ತಿಲ್ಲ.. ಲಕ್ಷ್ಮಣ ಸವದಿ, ಶಶಿಕಲಾ ಜೊಲ್ಲೆ, ಶ್ರೀಮಂತ ಪಾಟೀಲ ಈ ನಾಲ್ವರಲ್ಲಿ ಯಾರಿಗೆ ಸಚಿವ ಸ್ಥಾನ ನೀಡಿ, ಇಲ್ಲವಾದರೆ ಬಾಲಚಂದ್ರ ಜಾರಕಿಹೊಳಿ ಅವರಿಗೆ ನೀಡಲಿ. ಆದರೆ ಮುಖ್ಯಮಂತ್ರಿಗಳು ಪದೇ ಬೇರೆ ಜಿಲ್ಲೆಯ ಉಸ್ತುವಾರಿ ಜನರನ್ನು ನೇಮಿಸುತ್ತಿರುವದಿಂದ ಜನರಲ್ಲಿ ಗೊಂದಲ ಉಂಟಾಗುತ್ತಿದೆ. ಅಲ್ಲದೇ ಈ ನಾಲ್ವರು ಜಿಲ್ಲಾ ಉಸ್ತುವಾರಿಗೆ ಅಸಮರ್ಥರಿದ್ದಾರೆ ಎಂಬ ಅನುಮಾನ ಮೂಡುತ್ತಿದೆ ಎಂದರು.
ಸರಕಾರದ ಯೋಜನೆಗಳ ಜಾರಿಗೆ ತೊಂದರೆಯಾಗುತ್ತದೆ. ಜಿಲ್ಲೆಯ ಸಮಸ್ಯೆಗಳ ಬಗೆಗೆ ಬೇರೆ ಜಿಲ್ಲೆಯವರಿಗೆ  ಗೊತ್ತಿರುವದಿಲ್ಲ. ಇದರ ಜೊತೆಗೆ ಪಕ್ಷ ಸಂಘಟನೆಗೂ ಹೊಡೆತ ಬೀಳುತ್ತದೆ. ಹೀಗಾಗಿಯೇ ಲೋಕಸಭಾ ಉಪಚುನಾವಣೆಯ ಗೆಲುವಿನ ಅಂತರ ಕಡಿಮೆಯಾಗಿದೆ. ಇದೇ ರೀತಿ ಮುಂದುವರೆದರೆ ಬಿಜೆಪಿ ಪಕ್ಷ ಸಂಘಟನೆ ಹಾಗೂ ಸರಕಾರದ ಆಡಳಿತಕ್ಕೆ ಚುರುಕು ದೊರೆಯುವದಿಲ್ಲ. ಆದ್ದರಿಂದ ಮುಖ್ಯಮಂತ್ರಿಗಳು ಜಿಲ್ಲೆಯ ಯಾರಾದರೊಬ್ಬರಿಗೆ ಜಿಲ್ಲಾ ಉಸ್ತುವಾರಿ ಹೊಣೆ ನೀಡಬೇಕು ಎಂದು ಒತ್ತಾಯಿಸಿದರು.
Emergency Service

ಲೋಕಸಭಾ ಉಪಚುನಾವಣೆ ಹಿನ್ನಡೆಗೆ ಕಾರಣ:

ಲೋಕಸಭಾ ಉಪಚುನಾವಣೆಯ ಫಲಿತಾಂಶದ ಮೇಲೆಯೂ ಜಿಲ್ಲಾ ನಾಯಕರ ಮೇಲೆ ಪೂರ್ಣವಿಶ್ವಾಸವಿಡದೇ ಬೇರೆ ಜಿಲ್ಲೆಯವರನ್ನು ಉಸ್ತುವಾರಿಯಾಗಿ ನೇಮಕ ಮಾಡುತ್ತಿರುವುದು ಪರಿಣಾಮ ಬೀರಿದ್ದು, ಇದನ್ನು ಮುಖ್ಯಮಂತ್ರಿಗಳು ಹಾಗೂ ಬಿಜೆಪಿ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ.
Bottom Add3
Bottom Ad 2