ಪ್ರಗತಿವಾಹಿನಿ ಸುದ್ದಿ; ರಷ್ಯಾ; ಮಿಲಿಟರಿ ವಿಮಾನದಲ್ಲೇ ಭಾರೀ ದರೋಡೆ ನಡೆದ ಪ್ರಕರಣ ರಷ್ಯಾದಲ್ಲಿ ಬೆಳಕಿಗೆ ಬಂದಿದೆ. ಮಿಲಿಟರಿ ವಿಮಾನಕ್ಕೇ ಕನ್ನ ಹಾಕಿದ ದುಷ್ಕರ್ಮಿಗಳು 39 ರೇಡಿಯೋ ಉಪಕರಣಗಳನ್ನು ದೋಚಿದ್ದಾರೆ.
ದಕ್ಷಿಣ ರಷ್ಯಾದ ವಾಯುನೆಲೆಯಲ್ಲಿ ಇದ್ದ ಇಲ್ಯುಷಿಯನ್-80 ಎಂಬ ಡೂಮ್ಸ್ ಡೆ ಜೆಟ್ ವಿಮನಾದಲ್ಲಿ ಈ ಕಳ್ಳತನ ನಡೆದಿದೆ. ಈ ವಿಮಾನವನ್ನು ಸೈನ್ಯ ಮತ್ತು ಸರ್ಕಾರಕ್ಕೆ ವಿಪತ್ತು ಎದುರಾದಾಗ ವಾಯುಗಾಮಿ ಕಮಾಂಡ್ ಪೋಸ್ಟ್ ಆಗಿ ಬಳಕೆ ಮಾಡಲಾಗುತ್ತದೆ.
ಯುದ್ಧದ ಸಂದರ್ಭದಲ್ಲಿ ಪ್ರಮುಖ ನಾಯಕರು, ಮಿಲಿಟರಿ ಉನ್ನತಾಧಿಕಾರಿಗಳನ್ನು ರಕ್ಷಿಸಲು ಈ ಜೆಟ್ ವಿಮಾನವನ್ನು ಬಳಸಲಾಗುತ್ತದೆ. ರಷ್ಯಾದಲ್ಲಿ ಇಲ್ಯುಷಿಯನ್ 80ಯ ಒಟ್ಟು 4 ವಿಮಾನಗಳಿವೆ. ಇದೀಗ ಸಕಲ ಭದ್ರತೆಗಳಿರುವ ಈ ವಿಮಾನದಲ್ಲೇ 39 ರೇಡಿಯೋ ಉಪಕರಣಗಳನ್ನು ಕದ್ದೊಯ್ಯಲಾಗಿರುವುದು ಅಚ್ಚರಿಗೆ ಕಾರಣವಾಗಿದೆ.