Advertisement -Home Add

ಬಾತು ಕುಲಾಲ್ ಚಲನಚಿತ್ರ ಲೋಕದಲೊಂದು ಛಾಯಾಗ್ರಣದ ಕೋಲ್ಮಿಂಚು…

ಛಾಯಾಗ್ರಹಣ, ಸಂಕಲನ, ನಿರ್ದೇಶನಕ್ಕೂ ಸೈ ಈ ಅದ್ಭುತ ಪ್ರತಿಭೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಭರತ್ ಕುಲಾಲ್ ಎಂದರೆ ಬಹುಷ ತುಂಬಾ ಮಂದಿಗೆ ಯಾರು ಎನ್ನುವ ಪ್ರಶ್ನೆ ಮೂಡಬಹದು ಆದರೆ ಬಾತು ಕುಲಾಲ್ ಎಂದರೆ ಕರಾವಳಿ ಸಿನಿಮಾ ಮಂದಿ ಈವಾಗ ಇವರ ಕೆಲಸವನ್ನು ನೆನಪಿಸಿಕೊಳುವುವಷ್ಟು ಈ ಗಡಿನಾಡ ಪ್ರತಿಭೆ ಬೆಳೆದು ನಿಂತಿದ್ದಾರೆ..

ಇದಕ್ಕೆಲ್ಲ ಕಾರಣ ಅವರ ವಿಭಿನ್ನತೆ ಅವರ ಛಾಯಾಗ್ರಹಣ ಶೈಲಿ ಹಾಗು ಶ್ರದ್ದೆ.. ತನ್ನ ಕಾಯಕವನ್ನು ಅತಿಯಾಗಿ ಪ್ರೀತಿಸುವ ನೈಜ ಛಾಯಾಗ್ರಾಹಕನಿಂದ ಮಾತ್ರ ಅತ್ಯತ್ತಮ ದೃಶ್ಯ ವೈಭವ ನಿರೀಕ್ಷಿಸಲು ಸಾಧ್ಯ ಅನ್ನುವ ಮಾತನ್ನು ಅರಿತಿರುವ ಬಾತು ಕುಲಾಲ್ ತನ್ನ ಪ್ರತಿ ಕೆಲಸದಲ್ಲಿ ನೈಪುಣ್ಯತೆಯನ್ನು ಇನ್ನಷ್ಟು ಬಲಿಷ್ಠ ಗೊಳಿಸುತ್ತ ಸಾಗುತ್ತಿದ್ದಾರೆ.

ಛಾಯಾಗ್ರಹಣ ಸಂಕಲನ ನಿರ್ದೇಶನ ಎಲ್ಲದಕ್ಕೂ ಸೈ..

ಇವರ ಬಿ ಕೆ ಕ್ರಿಯೇಷನ್ ನಲ್ಲಿ ಮೂಡಿಬಂದ ಸ್ತ್ರೀ ಪ್ರಾಬಲ್ಯವನ್ನು ಉತ್ತುಂಗದ ಮಟ್ಟಿಗೆ ತೋರಿಸಿ ಪ್ರಖ್ಯಾತಿ ಪಡೆದ ನಾರಿ ಅನ್ನುವ ಕಿರುಚಿತ್ರ ಸಾವಿರಾರು ಜನರ ಮೆಚ್ಚುಗೆ ಪಡೆದಿದೆ ಅದೇ ರೀತಿ ಅನೇಕ ಯುವ ಚಿತ್ರ ನಿರ್ದೇಶಕರಿಗೆ ಪ್ರೇರಣೆಯು ಕೂಡ… ಅನಂತರ ಬಂದ ಪ್ರಶ್ನೋತ್ತರ ಎಂಬ ಕೇವಲ ಗ್ರಾಫಿಕ್ ತಂತ್ರಜ್ಞಾನದ ಕಿರುಚಿತ್ರ ಇವರ ಸಂಕಲನ ಪ್ರಾವಿಣ್ಯತೆಯ ಉನ್ನತಿಯನ್ನು ತೋರಿಸುತ್ತದೆ. ಇವೆರಡು ಅಲ್ಲದೆ ಅನೇಕ ಇವರ ಸಾಧನೆಗಳು ಬಿ ಕೆ ಕ್ರಿಯೇಷನ್ ಯೂ ಟ್ಯೂಬ್ ಚಾನಲ್ ನಲ್ಲಿ ಲಭ್ಯವಿದೆ.. ಇದನ್ನು ಬಾತು ಕುಲಾಲ್ ಅವರು ಚಿತ್ರೀಕರಣದ ಜೊತೆ ಸಂಕಲನ ಹಾಗೂ ಕತೆ ಚಿತ್ರಕತೆ ನಿರ್ದೇಶನ ಮಾಡಿರೋದು ವಿಶೇಷ.

ಕನ್ನಡ ಚಿತ್ರಕ್ಕೆ ಪಾದಾರ್ಪಣೆ…

ಇಂಥ ಪ್ರತಿಭೆಗೆ ಕನ್ನಡ ಚಿತ್ರರಂಗ ಕೈ ಬೀಸಿ ಕರೆದಿದ್ದು ಮೊದಲ ಚಿತ್ರವಾಗಿ ಕಪೋ ಕಲ್ಪಿತಂ ಚಿತ್ರಕ್ಕೆ ಛಾಯಾಗ್ರಹಣ ಹಾಗೂ ಸಂಕಲನ ಮಾಡಿರುವ ಬಾತು ಕುಲಾಲ್ ಈ ಚಿತ್ರ ವನ್ನು ದಾಖಲೆಯ 5 ದಿವಸಲ್ಲಿ ಅದೂ ಕೂಡ ಕೇವಲ ಗಿಂಬಲ್ ತಂತ್ರಜ್ಞಾನ ದಲ್ಲಿ ಒಂದೇ ಲೊಕೇಶನ್ ನಲ್ಲಿ ಮಾಡಿ ಮುಗಿಸಿ ತನ್ನ ಕಾಯಕದ ಕೌಶಲ್ಯತೆಯನ್ನು ಮೆರೆದಿದ್ದಾರೆ…ಸಾಧನೆಯ ದಾರಿಯಲ್ಲಿರುವ ಈ ಅದ್ಬುತ ಪ್ರತಿಭೆಗೆ ಯಶಸ್ಸು ಸಿಗಲಿ ಎಂದು ಹಾರೈಸೋಣ