Advertisement -Home Add

ನಟಿ ರಾಗಿಣಿಗೆ ಸಧ್ಯಕ್ಕಿಲ್ಲ ಬಿಡುಗಡೆ ಭಾಗ್ಯ

ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸ್ಯಾಂಡಲ್​ವುಡ್ ಗೆ ಡ್ರಗ್ಸ್ ಜಾಲದ ನಂಟು ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟಿ ರಾಗಿಣಿ ದ್ವಿವೇದಿ ಅವರ ಜಾಮೀನು ಅರ್ಜಿ ವಿಚಾರಣೆ ಮತೆ ಮುಂದೂಡಲಾಗಿದೆ.

ಇಂದು ನಟಿ ರಾಗಿಣಿಯ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಎನ್ ಡಿಪಿಎಸ್ ವಿಶೇಷ ನ್ಯಾಯಾಲಯ, ಅರ್ಜಿ ವಿಚಾರಣೆಯನ್ನು ಸೆ.19ಕ್ಕೆ ಮುಂದೂಡಿದೆ. ಈ ಪ್ರಕರಣದಲ್ಲಿ ಹೊಸ ಎಸ್​ಪಿಪಿಗಳ ನೇಮಕ ಹಿನ್ನೆಲೆಯಲ್ಲಿ ಹೊಸ ಅಭಿಯೋಜಕರಿಂದ ಕಾಲಾವಕಾಶ ಕೋರಲಾಗಿದೆ. ಆಕ್ಷೇಪಣೆ ಸಲ್ಲಿಸಲು ಅಭಿಯೋಜಕರು ಕಾಲಾವಕಾಶ ಕೋರಿದ್ದರಿಂದ ರಾಗಿಣಿ ಜಾಮೀನು ಅರ್ಜಿ ವಿಚಾರಣೆಯನ್ನು ಮತ್ತೆ ಮುಂದೂಡಲಾಗಿದೆ.

ಇನ್ನು ಪ್ರಕರಣ ಇನ್ನಿತರ ಆರೋಪಿಗಳಾದ ರಾಹುಲ್, ಶಿವಪ್ರಕಾಶ್, ವಿನಯ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನು ಕೂಡ ನ್ಯಾಯಾಲಯ ಸೆ.19ಕ್ಕೆ ಮುಂದೂಡಿದೆ.