
ವಿದ್ಯಾರ್ಥಿಗಳ ಎದುರಲ್ಲಿ ವೈದ್ಯೆಯ ಮೇಲೆಯೇ ಪ್ರೊಫೆಸರ್ ಲೈಂಗಿಕ ಕಿರುಕುಳ
ಹಾಸನ ಮೆಡಿಕಲ್ ಕಾಲೇಜು ಪ್ರೊಫೆಸರ್ ಸಸ್ಪೆಂಡ್
ಪ್ರಗತಿವಾಹಿನಿ ಸುದ್ದಿ; ಹಾಸನ; ಡ್ಯೂಟಿ ಡಾಕ್ಟರ್ ಮೇಲೆಯೇ ಮೆಡಿಕಲ್ ಕಾಲೇಜು ಪ್ರೊಫೆಸರ್ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಕೇಳಿಬಂದಿದ್ದು, ಹಾಸನ ಮೆಡಿಕಲ್ ಕಾಲೇಜು ಪ್ರೊಫೆಸರ್ ಡಾ.ಲೋಕೇಶ್ ರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಹಾಸನ ಮೆಡಿಕಲ್ ಕಾಲೇಜಿನಲ್ಲಿಯೇ ಈ ಘಟನೆ ನಡೆದಿದ್ದು, ತರಬೇತಿ ವೈದ್ಯೆಯಾಗಿ ಸೇರಿಕೊಂಡಿದ್ದ ಯುವತಿ ಮೇಲೆ ಡಾ.ಲೋಕೇಶ್ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎನ್ನಲಾಗಿದೆ. ಜನವರಿ 12ರಂದು ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯೆ ರೋಗಿಯೊಬ್ಬಗರಿಗೆ ಚಿಕಿತ್ಸೆ ನೀಡುತ್ತಿದ್ದರು ಈ ವೇಳೆ ವಿದ್ಯಾರ್ಥಿಗಳ ಎದುರಲ್ಲಿಯೇ ಡಾ.ಲೋಕೇಶ್ ವೈದ್ಯೆ ಜತೆ ಅನುಚಿತವಾಗಿ ವರ್ತಿಸಿದ್ದಾನೆ. ಅಲ್ಲದೇ ಲಿಫ್ಟ್ ನಲ್ಲಿ ಕೂಡ ಬಲವಂತವಾಗಿ ಮುತ್ತಿಟ್ಟು ಕಿರುಕುಳ ನೀಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಅಲ್ಲದೇ ತನ್ನ ಕೋಣೆಗೂ ಬರುವಂತೆ ಒತ್ತಾಯಿಸಿರುವ ಪ್ರೊಫೇಸರ್ ಡಾ.ಲೋಕೇಶ್, ವಿಷಯ ಬಾಯ್ಬಿಟ್ಟರೆ ಮರ್ಯಾದೆ ಹೋಗುವುದಾಗಿ ಬೆದರಿಸಿದ್ದಾನೆ. ಜನವರಿ 13ರಂದು ಸಂತ್ರಸ್ತೆ ದೂರು ನೀಡಿದ್ದು, ಲೋಕೇಶ್ ವಿರುದ್ಧದ ಆರೋಪ ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ಲೋಕೇಶ್ ನನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ನಿಖರ, ನಿರಂತರ ಮತ್ತು ನಿಷ್ಪಕ್ಷಪಾತ ಸುದ್ದಿಗಳಿಗಾಗಿ ಪ್ರಗತಿವಾಹಿನಿ ಗ್ರುಪ್ ಸೇರಲು NEWS ಎಂದು ಟೈಪ್ ಮಾಡಿ 8197712235 ನಂಬರ್ ಗೆ ವಾಟ್ಸಪ್ ಮಾಡಿ.
ದಯವಿಟ್ಟು ನಮ್ಮ YouTube ಚಾನೆಲ್ ಗೆ ಸಬ್ ಸ್ಕ್ರೈಬ್ ಮಾಡಿ