Athani Takkennavar
Beereshwara13
GIT add4

ಸಿದ್ದರಾಮಯ್ಯ ಜನ್ಮ ದಿನದಂದೇ ರಾಜಕೀಯ ನಿವೃತ್ತಿ ಘೋಷಣೆ ಮಾಡಲಿ – ಅಶ್ವತ್ಥನಾರಾಯಣ; ಡಾ.ಪ್ರಭಾಕರ ಕೋರೆಗೆ ಉನ್ನತ ಸ್ಥಾನಗಳು ಸಿಗಲಿ

Siddaramaiah should announce his retirement from politics on his birthday - Ashwatthanarayan

KLE1099 Add

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ, ರಾಜ್ಯಸಭೆಯ ಮಾಜಿ ಸದಸ್ಯ ಡಾ.ಪ್ರಭಾಕರ ಕೋರೆ ಅವರು ಎಲ್ಲ ಸ್ಥಾನಗಳನ್ನು ಅಲಂಕಾರ ಮಾಡಲು ಯೋಗ್ಯರಿರುವಂತವರು. ಅವರ ಸಾಮರ್ಥ್ಯಕ್ಕೆ ಈ ಸಂಸ್ಥೆಯೇ ಮಾದರಿ. ಎಷ್ಟು ಅಚ್ಚುಕಟ್ಟಾ ಕಟ್ಟಿದ್ದಾರೆ. ಎಲ್ಲರಿಗೂ ಅವರು ಪ್ರೇರಣೆಯಾಗಿದ್ದಾರೆ. ಅವರಿಗೆ ಉತ್ತಮ ಹುದ್ದೆಗಳು ಸಿಗಲಿ ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಹಾರೈಸಿದ್ದಾರೆ.

ಬೆಳಗಾವಿಯಲ್ಲಿ ಬುಧವಾರ ಕೆಎಲ್ಇ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಪಾಲ್ಗೊಂಡ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು. ನಾನು ಕೋರೆ ಅವರ ಶ್ರೇಯಸ್ಸನ್ನು ಬಯಸುತ್ತೇನೆ. ಅವರು ಕಟ್ಟಿದ ಸಂಸ್ಥೆಯ ಮಾದರಿಯಾಗಿದೆ. ಇಂತಹ ಸಂಸ್ಥೆಗಳು ಹೆಚ್ಚಾಗಿ ಬೆಳೆಯಬೇಕು. ಆಗ ವಿಶ್ವದಲ್ಲೇ ಬೆಳವಣಗೆ, ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದೂ ಅವರು ಹೇಳಿದರು.

ಕಾಂಗ್ರೆಸ್ ಮ್ಯೂಸಿಯಂ ಸೇರಲಿದೆ 

ಕಾಂಗ್ರೆಸ್ ಅಸ್ಥಿತ್ವ ಕಳೆದುಕೊಂಡಿರುವ ಪಕ್ಷ.  ವಿಚಾರಗಳ ಸ್ಪಷ್ಟತೆ ಇಲ್ಲ, ಅಧಿಕಾರಕ್ಕಾಗಿ ಹಾತೊರೆಯುತ್ತಿರುವ ಪಕ್ಷ. ಭ್ರಷ್ಟಾಚಾರ ತಾಂಡವವಾಡಲು ಕಾರಣವಾದ ಪಕ್ಷ. ಅದನ್ನು ಕ್ಲೀನ್ ಮಾಡಲು ಸಾಧ್ಯವಾಗದಷ್ಟು ಬುನಾದಿ ಹಾಕಿದ್ದಾರೆ. ಈ ಪಕ್ಷ ಕೆಲವೇ ವರ್ಷಗಳಲ್ಲಿ ಮ್ಯೂಸಿಯಂಗೆ ಸೇರಿಕೊಳ್ಳುತ್ತೆ. ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷ ಇತ್ತು ಎಂದು ಮ್ಯೂಸಿಯಂ ನಲ್ಲಿ ನೋಡಬೇಕಾಗುತ್ತದೆ ಎಂದು ಅಶ್ವತ್ಥ ನಾರಾಯಣ ಲೇವಡಿ ಮಾಡಿದರು.

ಎಲ್ಲರೂ ನಾನು ನಾನು ಎನ್ನುತ್ತಿದ್ದಾರೆ. ಯಾವುದೇ ತತ್ವ ಇಲ್ಲ. ಸಿದ್ದರಾಮಯ್ಯ ಇವತ್ತಿನ ಕಾಲಕ್ಕೆ ಅಪ್ರಸ್ತುತ. ಔಟ್ ಡೇಟೆಡ್ ಮಾಡೆಲ್ ಇವರು. ಇವರ ಮೋಜು ಮಸ್ತಿ. ಜನ 5 ವರ್ಷ ಸಹಿಸಿದ್ದಾರೆ. ಇನ್ನೆಷ್ಟು ದಿನ ಸಹಿಸಬೇಕು. ಯಾವ ಕಾರಣ ಇಟ್ಟುಕೊೆಂಡು ಜನ್ಮದಿನ ಆಚರಣೆ ಮಾಡಿಕೊಳ್ಳುತ್ತಿದ್ದಾರೆ ಗೊತ್ತಾಗುತ್ತಿಲ್ಲ. ಜನ್ಮ ದಿನದಂದೇ ನಿವೃತ್ತಿ ಘೋಷಣೆ ಮಾಡಲಿ. ಇವರು ಆಶಿರ್ವಾದ ಮಾಡಿಕೊಂಡಿರಬೇಕು ಎಂದೂ ಅವರು ಹೇಳಿದರು.

ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯದ ಉಪಕುಲಪತಿ ನೇಮಕಕ್ಕೆ ಸರ್ಚ್ ಸಮಿತಿ ರಚನೆ ಮಾಡಲಾಗುವುದು. ನನಗೆ ಗೊತ್ತಿರುವ ಹಾಗೆ ಇವರನ್ನೇ ಮುಂದುವರಿಸುವ ಯಾವ ಪ್ರಸ್ತಾವನೆಯೂ ಇಲ್ಲ ಎಂದೂ ಅಶ್ವತ್ಥ ನಾರಾಯಣ ಹೇಳಿದರು.

ಡಾ.ಪ್ರಭಾಕರ ಕೋರೆ ಇದ್ದರು.

ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ವಿರುದ್ಧ FIR ದಾಖಲು

ಬೆಳಗಾವಿ: ಕೃಷ್ಣನನ್ನೇ ನುಂಗಿದ ಕಲಿಯುಗದ ಭಕ್ತ! ಗಂಟಲಿಂದ ಹೊರತೆಗೆದ KLE ವೈದ್ಯರು!!

Nivedita Navalgund
You cannot copy content of this page