Athani Takkennavar
Beereshwara13
GIT add4

ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ಕಲ್ಲು ಹೊಡೆಯಬಹುದಿತ್ತು; ಬಿಜೆಪಿ ಸಂಸದರ ಆಡಿಯೋ ವೈರಲ್

ವಿವಾದಾತ್ಮಕ ಹೇಳಿಕೆ ನೀಡಿದ ಸಂಸದ ತೇಜಸ್ವಿ ಸೂರ್ಯ

KLE1099 Add

ಪ್ರಗತಿವಾಹಿನಿ ಸುದ್ದಿ; ಚಿಕ್ಕಮಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಬೆನ್ನಲ್ಲೇ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ಬಿಜೆಪಿ ಪದಾಧಿಕಾರಿಗಳು, ಜಿಲ್ಲಾ ಮುಖಂಡರೆ ಸಾಮೂಹಿಕ ರಾಜೀನಾಮೆ ನೀಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬಿಜೆಪಿ ಮುಖಂಡರ ಸಾಮೂಹಿಕ ರಾಜಿನಾಮೆ ಪರ್ವ ಮುಂದುವರೆಯುತ್ತಿದ್ದಂತೆ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂದೀಪ್ ಗೆ ಕರೆ ಮಾಡಿರುವ ಸಂಸದ ತೇಜಸ್ವಿ ಸೂರ್ಯ, ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದು, ವೈರಲ್ ಆಗಿದೆ.

ಯುವ ಮೋರ್ಚಾ ಅಧ್ಯಕ್ಷ ಸಂದೀಪ್ ಜತೆ ಮಾತನಾಡಿರುವ ಸಂಸದರು, ಸರ್ಕಾರ ನಮ್ಮದೇ ಇದೆ. ಒಂದು ವೇಳೆ ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ಕಲ್ಲು ಹೊಡೆಯಬಹುದಿತ್ತು. ಆದರೆ ಏನು ಮಾಡೋದು… ಎಲ್ಲಾ ಜಿಲ್ಲಾಧ್ಯಕ್ಷರು ಸೇರಿ ಸಿಎಂ ಭೇಟಿ ಮಾಡೋಣ ಎಂದು ಹೇಳಿದ್ದಾರೆ.

ಇದೇ ವೇಳೆ ರಾಜೀನಾಮೆಯನ್ನು ವಾಪಸ್ ಪಡೆಯುವಂತೆ ಹೇಳಿರುವ ತೇಜಸ್ವಿ ಸೂರ್ಯ, ನಾನು ನಾಲ್ಕು ಲೈನ್ ಟೈಪ್ ಮಾಡಿ ಕಳುಹಿಸುತ್ತೇನೆ. ಅದನ್ನೂ ಗ್ರೂಪ್ ಗೆ ಹಾಕಿ ಎಂದು ತಿಳಿಸಿದ್ದಾರೆ.

ತೇಜಸ್ವಿ ಸೂರ್ಯ ಅವರದ್ದು ಎನ್ನಲಾಗಿರುವ ಫೋನ್ ಸಂಭಾಷಣೆ ಆಡಿಯೋ ಇದೀಗ ವೈರಲ್ ಆಗಿದ್ದು, ಸಂಸದರ ವಿವಾದಾತ್ಮಕ ಹೇಳಿಕೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಪ್ರತಿಯೊಬ್ಬರಿಗೂ ಸೆಕ್ಯುರಿಟಿ ಗಾರ್ಡ್ ಕೊಡೋಕಾಗುತ್ತಾ? -ತೇಜಸ್ವಿ ಸೂರ್ಯ ಪ್ರಶ್ನೆ; ಕಾಂಗ್ರೆಸ್ ಸರಕಾರವಿದ್ದಿದ್ರೆ ಹೀಗೇ ಹೇಳ್ತಿದ್ರಾ?

ಪ್ರವೀಣ್ ನೆಟ್ಟಾರು ಹತ್ಯೆ; NIA ತನಿಖೆಗೆ ಒತ್ತಾಯಿಸಿ ಕೇಂದ್ರ ಗೃಹ ಸಚಿವರಿಗೆ ಶೋಬಾ ಕರಂದ್ಲಾಜೆ ಪತ್ರ

Nivedita Navalgund
You cannot copy content of this page