Advertisement -Home Add
Crease wise (28th Jan)
KLE1099 Add

ಇಬ್ಬರು ಸಚಿವರು ಸೇರಿ ನಾಲ್ವರ ಬಂಧನ

ನಾರದ ಹಗರಣ; ಟಿಎಂಸಿ ನಾಲ್ವರು ಮುಂಖಂಡರು ಅರೆಸ್ಟ್

ಪ್ರಗತಿವಾಹಿನಿ ಸುದ್ದಿ; ಕೋಲ್ಕತ್ತಾ: ನಾರದ ಸ್ಕ್ಯಾಮ್ ಗೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಪಶ್ಚಿಮ ಬಂಗಾಳದ ಇಬ್ಬರು ಸಚಿವರು, ಓರ್ವ ಶಾಸಕ ಹಾಗೂ ಟಿಎಂಸಿ ಮಾಜಿ ಮುಖಂಡ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.

ನಾರದ ಮಾರುವೇಷ ಕಾರ್ಯಾಚರಣೆ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಟಿಎಂಸಿಯ ನಾಲ್ವರು ನಾಯಕರ ಮನೆ ಮೇಲೆ ದಾಳಿ ನಡೆಸಿದ್ದು, ಈ ವೇಳೆ ಸಾರಿಗೆ ಸಚಿವ ಫಿರ್ಹಾದ್ ಹಕೀಮ್, ಪಂಚಾಯತ್ ಸಚಿವ ಸುಬ್ರತಾ ಮುಖರ್ಜಿ, ಶಾಸಕ ಮದನ್ ಮಿತ್ರಾ ಹಾಗೂ ಟಿಎಂಸಿ ಮಾಜಿ ಮುಖಂಡ ಸೋನಮ್ ಚಟರ್ಜಿ ಅವರನ್ನು ಬಂಧಿಸಿದ್ದಾರೆ.

ಟಿಎಂಸಿ ನಾಲ್ವರು ಮುಖಂಡರ ವಿರುದ್ಧ ತನಿಖೆಗೆ ಅನುಮತಿ ನೀಡುವಂತೆ ಸಿಬಿಐ ಅಧಿಕಾರಿಗಳು ರಾಜ್ಯಪಾಲ ಜಗದೀಪ್ ಧನ್ ಕರ್ ಅವರನ್ನು ಕೋರಿದ್ದರು. ವಾರದ ಹಿಂದಷ್ಟೇ ರಾಜ್ಯಪಾಲರು ಅನುಮತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.
ಟಗ್ ಬೋಟ್ ನಲ್ಲಿ ಸಿಲುಕಿದ್ದ 9 ಜನರ ರಕ್ಷಣೆ