Advertisement -Home Add

ಬಸ್ ಗೆ ರೈಲು ಡಿಕ್ಕಿ; 29 ಜನ ದುರಂತ ಅಂತ್ಯ

ಸಿಖ್ ಯಾತ್ರಿಕರಿದ್ದ ಮಿನಿ ಬಸ್‌

ಪ್ರಗತಿವಾಹಿನಿ ಸುದ್ದಿ; ಇಸ್ಲಾಮಾಬಾದ್: ಮಿನಿ ಬಸ್‌ಗೆ ರೈಲು ಡಿಕ್ಕಿ ಹೊಡೆದ ಪರಿಣಾಮ 29 ಸಿಖ್ ಯಾತ್ರಿಕರು ಧಾರುಣವಾಗಿ ಮೃತಪಟ್ಟಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.

ಕರಾಚಿಯಿಂದ ಲಾಹೋರ್‌ಗೆ ಬರುತ್ತಿದ್ದ ಷಾ ಹುಸೇನ್ ಎಕ್ಸ್‌ಪ್ರೆಸ್ ಇಂದು ಮಧ್ಯಾಹ್ನ 1.30 ಕ್ಕೆ ಲಾಹೋರ್‌ನಿಂದ 60 ಕಿ.ಮೀ ದೂರದಲ್ಲಿರುವ ಫಾರೂಕಾಬಾಬ್‌ನಲ್ಲಿ ಮಾನವರಹಿತ ಲೆವೆಲ್ ಕ್ರಾಸಿಂಗ್‌ನಲ್ಲಿ, ಸಿಖ್ ಯಾತ್ರಾರ್ಥಿಗಳನ್ನು ಹೊತ್ತ ಮಿನಿ ಬಸ್‌ಗೆ ಡಿಕ್ಕಿ ಹೊಡೆದಿದೆ.

ಘರ್ಷಣೆಯಲ್ಲಿ ಕನಿಷ್ಠ 29 ಜನ ಸಾವನ್ನಪ್ಪಿದ್ದಾರೆ, ಮೃತಪಟ್ಟವರಲ್ಲಿ ಪಾಕಿಸ್ತಾನಿ ಸಿಖ್ಖರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಇವರೆಲ್ಲರೂ ಯಾತ್ರಿಕರಾಗಿದ್ದು, ನಂಕಾನಾ ಸಾಹಿಬ್‌ನಿಂದ ಹಿಂದಿರುಗುತ್ತಿದ್ದರು ಎಂದು ಪಾಕಿಸ್ತಾನದ ಇವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ (ಇಟಿಪಿಬಿ) ವಕ್ತಾರ ಅಮೀರ್ ಹಶ್ಮಿ ತಿಳಿಸಿದ್ದಾರೆ.