*BREAKING: ಶಿರಸಿಯಲ್ಲಿ LPG ಸಿಲಿಂಡರ್ ಸ್ಫೋಟ: ಯುವತಿ ಸಾವು*

ಪ್ರಗತಿವಾಹಿನಿ ಸುದ್ದಿ: ಎಲ್ ಪಿಜಿ ಸಿಲಿಂಡರ್ ಸ್ಫೋಟಗೊಂಡು ಯುವತಿ ಸಾವನ್ನಪ್ಪಿರುವ ದಾರುಣ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮರ್ಕಿಕೊಡ್ಲು ಗ್ರಾಮದಲ್ಲಿ ನಡೆದಿದೆ. ರಂಜಿತಾ ನಾಗಪ್ಪ ದೇವಾಡಿಗ (21) ಮೃತ ಯುವತಿ. ಅನಾರೋಗ್ಯದ ಕಾರಣದಿಂದಾಗಿ ರಂಜಿತಾ ಮನೆಯಲ್ಲಿದ್ದರು. ತಂದೆ-ತಾಯಿ ಕೆಲಸಕ್ಕೆಂದು ಹೊರ ಹೋಗಿದ್ದರು. ಈ ವೇಳೆ ಮನೆಯಲ್ಲಿದ್ದ ಸಿಲಿಂಡರ್ ಇದ್ದಕ್ಕಿದ್ದಂತೆ ಸ್ಫೋಟಗೊಂಡಿದ್ದು, ಯುವತಿ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಶಿರಸಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. Home add -Advt *BREAKING: ಮಹೇಶ್ … Continue reading *BREAKING: ಶಿರಸಿಯಲ್ಲಿ LPG ಸಿಲಿಂಡರ್ ಸ್ಫೋಟ: ಯುವತಿ ಸಾವು*