*ಬೆಳಗಾವಿಯಲ್ಲಿ ಆನೆ ತುಳಿತಕ್ಕೆ ಸಿಲುಕಿ ಮಾವುತ ಸಾವು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಆನೆ ತುಳಿತಕ್ಕೆ ಸಿಲುಕಿ ಮಾವುತ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಅಲಖನೂರ ಗ್ರಾಮದಲ್ಲಿ ನಡೆದಿದೆ. ರಾಯಬಾಗ ತಾಲೂಕಿನ ಅಲಖನೂರ ಕರಿಸಿದ್ದೇಶ್ವರ ದೇವಸ್ಥಾನದ ಧೃವ ಎಂಬ ಆನೆಯಿಂದ ಮಾವುತನ ಸಾವನ್ನಪ್ಪಿದ್ದಾನೆ. ಅಲಖನೂರ ಗ್ರಾಮದ ಧರೆಪ್ಪ ಭೇವನೂರ (32) ಮೃತ ದುರ್ದೈವಿ. ನಿನ್ನೆ ರಾತ್ರಿ ಧೃವ ಆನೆಗೆ ಮಧ ಬಂದಹಾಗೆ ಆಗಿತ್ತು. ಇಂದು ಬೆಳಿಗ್ಗೆ ಮತ್ತೆ ಮಧ ಬಂದ ಹಿನ್ನೆಲೆಯಲ್ಲಿ ಆನೆಗೆ ಮೇವು ಹಾಕಲು ಹೋದಾಗ ಆನೆ ಮಾವುತನ‌ ಮೇಲೆ ದಾಳಿ ಮಾಡಿದೆ. … Continue reading *ಬೆಳಗಾವಿಯಲ್ಲಿ ಆನೆ ತುಳಿತಕ್ಕೆ ಸಿಲುಕಿ ಮಾವುತ ಸಾವು*