*ರಸ್ತೆ ಬದಿಯ ಕಂದಕಕ್ಕೆ ಉರುಳಿ ಬಿದ್ದ ಸಂಸದನ ಬೆಂಗಾವಲು ವಾಹನ*: *ಐವರಿಗೆ ಗಂಭೀರ ಗಾಯ*

ಪ್ರಗತಿವಾಹಿನಿ ಸುದ್ದಿ: ಸಂಸದ ಪಪ್ಪು ಯಾದವ್ ಅವರ ಬೆಂಗಾವಲು ವಾಹನ ಭೀಕರ ಅಪಘಾತಕ್ಕೀಡಾಗಿದೆ. ಪರಿಣಾಮ ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ನಿರ್ಮಾಣ ಹಂತದಲ್ಲಿರುವ ಸೇತುವೆಯ ಸಮೀಪ ಬೆಂಗಾವಲು ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಆಳವಾದ ಕಂದಕಕ್ಕೆ ಬಿದ್ದಿದೆ. ಘಟನೆಯಲ್ಲಿ ವಾಹನದಲ್ಲಿದ್ದ ಐವರು ಗಾಯಗೊಂಡಿದ್ದು, ಸಂಸದ ಪಪ್ಪು ಯಾದವ್ ಅಪಾಯದಿಂದ ಪಾರಾಗಿದ್ದಾರೆ. ಭಾನುವಾರ ರಾತ್ರಿ ಬಿಹಾರದ ಕತಿಹಾರ್‌ನಿಂದ ಸಂಹೌಲಿಗೆ ತೆರಳುತ್ತಿದ್ದ ವೇಳೆ ಬೆಲೋರಿ–ಸಂಹೌಲಿ–ಸೋನೈಲಿ–ಸಲ್ಮಾರಿ ಮುಖ್ಯ ರಸ್ತೆಯ ಕುಮ್ಹರಿ ಗ್ರಾಮದ ಬಳಿ ವಾಹನ ಅಪಘಾತಕ್ಕೀಡಾಗಿದೆ. ಭಾನುವಾರ … Continue reading *ರಸ್ತೆ ಬದಿಯ ಕಂದಕಕ್ಕೆ ಉರುಳಿ ಬಿದ್ದ ಸಂಸದನ ಬೆಂಗಾವಲು ವಾಹನ*: *ಐವರಿಗೆ ಗಂಭೀರ ಗಾಯ*