*BREAKING: ಜಂಬೂಸವಾರಿ ನೋಡಲು ನೆರೆದ ಜನಸಾಗರ*: *ಬಲರಾಮ ದ್ವಾರದ ಬಳಿ ನೂಕಾಟ-ತಳ್ಳಾಟ*: *ನಾಲ್ವರು ಅಸ್ವಸ್ಥ*

ಪ್ರಗತಿವಾಹಿನಿ ಸುದ್ದಿ: ವಿಶ್ವವಿಖ್ಯಾತ ಮೈಸೂರು ದಸರಾದ ಅಂತಿಮ ಘಟ್ಟ ಜಂಬೂಸವಾರಿ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ಸಾಂಸ್ಕೃತಿಕ ನಗರಿಗೆ ದೇಶ-ವಿದೇಶಗಳಿಂದ ಜನ ಸಾಗರವೇ ಹರಿದು ಬಂದಿದೆ. ಅರಮನೆಯ ಬಲರಾಮ ದ್ವಾರ ಹಾಗೂ ಸುತ್ತಮುತ್ತಲ ಜಂಕ್ಷನ್‌ಗಳಲ್ಲಿ ಲಕ್ಷಾಂತರ ಸಾರ್ವಜನಿಕರು ಕಿಕ್ಕಿರಿದು ನೆರೆದಿದ್ದು, ತೀವ್ರ ನೂಕಾಟ-ತಳ್ಳಾಟ ನಡೆದಿದ್ದು, ನಾಲ್ವರು ಅಸ್ವಸ್ಥರಾಗಿದ್ದಾರೆ. ಜನಸಂದಣಿಯ ಒತ್ತಡದಿಂದಾಗಿ ಬಲರಾಮ ದ್ವಾರದ ಬಳಿ ನಾಅಲ್ವರು ಅಸ್ವಸ್ಥರಾಗಿದ್ದಾರೆ. ಜಂಬೂಸವಾರಿ ಮೆರವಣಿಗೆ ಆರಂಭಕ್ಕೂ ಮುನ್ನವೇ ಈ ಘಟನೆ ನಡೆದಿದೆ. *ವಜ್ರಮುಷ್ಠಿ ಕಾಳಗ ದಿಢೀರ್ ರದ್ದು*