*ನಗರಸಭೆ ವ್ಯವಸ್ಥಾಪಕಿ ಸಸ್ಪೆಂಡ್*

ಪ್ರಗತಿವಾಹಿನಿ ಸುದ್ದಿ: ಲೋಕಸಭಾ ಚುನಾವಣೆ ವೇಳೆ ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿಹರ ನಗರಸಭೆ ವ್ಯವಸ್ಥಾಪಕಿಯನ್ನು ಅಮಾನತುಮಾಡಲಾಗಿದೆ. ಹೆಚ್.ನಿರಂಜನಿ ಅಮಾನತುಗೊಂಡ ನಗರಸಭೆ ವ್ಯವಸ್ಥಾಪಕಿ. ಲೋಕಸಭಾ ಚುನಾವಣೆ ವೇಳೆ ಹಣ ದುರುಪಯೋಗ, ಕರ್ಯವ್ಯಕ್ಕೆ ಸರಿಯಾಗಿ ಹಾಜರಾಗದಿರುವುದು, ಸಾರ್ವಜನಿಕರ ಕೆಲಸ ನಿರ್ಲಕ್ಷ್ಯ, ಕರ್ತವ್ಯ ಲೋಪ ಸೇರಿದಂತೆ ಇತರ ಆರೋಪ ನಿರಂಜನಿ ಮೇಲೆ ಇದೆ. ಈ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಅವರು ನಗರಸಭೆ ಅಧಿಕಾರಿ ನಿರಂಜನಿ ಅವರನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ. Home add -Advt *ಯೋಧರ ಕ್ಯಾಂಟೀನ್ … Continue reading *ನಗರಸಭೆ ವ್ಯವಸ್ಥಾಪಕಿ ಸಸ್ಪೆಂಡ್*