Beereshwara add 5
Crease wise add 8
KLE1099 Add

ರೈಲ್ವೆ- ಪ್ಲ್ಯಾಟ್ ಫಾರ್ಮ್ ಮಧ್ಯೆ ಸಿಕ್ಕಿದ್ದ ವ್ಯಕ್ತಿ ರಕ್ಷಣೆ: ಮೈ ಜುಮ್ಮೆನ್ನಿಸುವ ವಿಡೀಯೋ

 A Railway Protection Force constable rescued a passenger at Vasco Da Gama Railway station who got stuck in the gap between platform and the train.

 

ಪ್ರಗತಿವಾಹಿನಿ ಸುದ್ದಿ, ಗೋವಾ – ಚಲಿಸುತ್ತಿದ್ದ ರೈಲು ಹತ್ತಲು ಪ್ರಯತ್ನಿಸಿ ಕೆಳಕ್ಕೆ ಬಿದ್ದು ರೈಲು ಮತ್ತು ಪ್ಲ್ಯಾಟ್ ಫಾರ್ಮ್ ಮಧ್ಯೆ ಸಿಕ್ಕಿದ್ದ ವ್ಯಕ್ತಿಯನ್ನು ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ಪೊಲೀಸರೊಬ್ಬರು ಸಿನಿಮೀಯ ರೀತಿಯಲ್ಲಿ ರಕ್ಷಿಸಿದ್ದಾರೆ.

ಮಾ.10ರಂದು ರಾತ್ರಿ 7.15ಕ್ಕೆ ಈ ಘಟನೆ ನಡೆದಿದ್ದು, ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಪ್ರಯಾಣಿಕನೊಮ್ಮೆ 02741 ವಾಸ್ಕೋಡಾಗಾಮಾ -ಪಾಟ್ನಾ ಸೂಪರ್ ಫಾಸ್ಟ್ ಎಕ್ಸಪ್ರೆಸ್ ವಿಶೇಷ ರೈಲನ್ನು ಪ್ಲ್ಯಾಟ್ ಫಾರ್ಮ್ 1ರಲ್ಲಿ ಚಲಿಸುತ್ತಿರುವಪಾಗಲೇ ಹತ್ತಲು ಪ್ರಯತ್ನಿಸಿದ್ದ. ಆದರೆ ಆತ ಆಯತಪ್ಪಿ ಕೆಳಕ್ಕೆ ಬಿದ್ದ. ಈ ವೇಳೆ ಪ್ಲ್ಯಾಟ್ ಫಾರ್ಮ್ ಮತ್ತು ರೈಲಿನ ಮಧ್ಯೆ ಆತ ಸಿಕ್ಕಿಹಾಕಿಕೊಂಡಿದ್ದ.

ಇದನ್ನು ಗಮನಿಸಿದ ಕೆ.ಎಂ.ಪಾಟೀಲ ಎನ್ನುವ ಆರ್ ಪಿಎಫ್ ಹೆಡ್ ಕಾನ್ ಸ್ಟೆಬಲ್ ಗಮನಿಸಿ ತಕ್ಷಣ ಓಡಿ ಹೋಗಿ ಸಿಕ್ಕಿಹಾಕಿಕೊಂಡಿದ್ದ ವ್ಯಕ್ತಿಯನ್ನು ಎಳೆದು ಹೊರತೆಗೆದಿದ್ದಾರೆ. ಸಿಸಿಟಿವಿ ಕ್ಯಾಮೆರಾದಲ್ಲಿ ಈ ಘಟನೆ ಸೆರೆಯಾಗಿದೆ.ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಅರವಿಂದ ಮಾಲ್ಖೆಡೆ ಕಾನ್ ಸ್ಟೆಬಲ್ ಕಾರ್ಯವನ್ನು ಶ್ಲಾಘಿಸಿದ್ದಾರೆ.