Advertisement

ಚೀನಾಗೆ ಭರ್ಜರಿ ಹೊಡೆತ ಕೊಟ್ಟ ಕೇಂದ್ರ ಸರಕಾರ

59 ಪ್ರಮುಖ ಆ್ಯಪ್ ಬ್ಯಾನ್

ಪ್ರಗತಿವಾಹಿನಿ ಸುದ್ದಿ, ನವದೆಹಲಿ – ಭಾರತಕ್ಕೆ ಅನಗತ್ಯವಾಗಿ ಕಿರಿಕ್ ಮಾಡುತ್ತಿರುವ ಚೀನಾಕ್ಕೆ ಕೇಂದ್ರ ಸರಕಾರ ಮೊದಲ ಭರ್ಜರಿ ಹೊಡೆತ ನೀಡಿದೆ. ಚೀನಾದ 59 ಪ್ರಮುಖ ಆ್ಯಪ್ ಗಳನ್ನು ನಿಷೇಧಿಸುವ ಮೂಲಕ ಎಚ್ಚರಿಕೆಯ ಸಂದೇಶ ರವಾನಿಸಿದೆ.

ಕೊರೋನಾ ವೈರಸ್ ಹರಡಿದ ನಂತರ ಮತ್ತೊಂದು ಕಿರಿಕ್ ಮಾಡುತ್ತ ಭಾರತದ ಗಡಿಯಲ್ಲಿ ತಂಟೆ ತೆಗೆದ ಚೀನಾ ಭಾರತದ ನೆಮ್ಮದಿ ಕೆಡಿಸುತ್ತಿದೆ. ಅಮಾಯಕ 20 ಯೋಧರನ್ನು ಬಲಿತೆಗೆದುಕೊಂಡಿದೆ. ಇದರಿಂದಾಗಿ ಕೇಂದ್ರ ಸರಕಾರ ಚೀನಾಕ್ಕೆ ಪಾಠ ಕಲಿಸಲು ಮುಂದಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಸುಮ್ಮನೇ ಬಿಡುವುದಿಲ್ಲ ಎನ್ನುವ ಸಂದೇಶವನ್ನು ನೀಡಿದ್ದರು. ಭಾರತೀಯ ಯೋಧರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಘೋಷಿಸಿದ್ದರು.

ಇದೀಗ 59 ಪ್ರಮುಖ ಆ್ಯಪ್ ಬ್ಯಾನ್ ಮಾಡುವ ಮೂಲಕ ಸೂಕ್ತ ಎಚ್ಚರಿಕೆ ನೀಡಿದೆ.