Advertisement -Home Add

ಐ ಸ್ಟ್ಯಾಂಡ್ ವಿತ್ ಅನಂತ ಹೆಗಡೆ -ಸಾಮಾಜಿಕ ಜಾಲತಾಣಗಳಲ್ಲಿ ಹ್ಯಾಶ್ ಟ್ಯಾಗ್

ನೋಟೀಸ್ ನೀಡಿದ್ದಕ್ಕೆ ಆಕ್ರೋಶ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಮಹಾತ್ಮಾ ಗಾಂಧಿ ವಿರುದ್ಧ ಹೇಳಿಕೆ ನೀಡಿದ್ದಾರೆ ಎನ್ನುವ ಆರೋಪ ಹೊರಿಸಿ ಮಾಜಿ ಕೇಂದ್ರ ಸಚಿವ, ಸಂಸದ ಅನಂತಕುಮಾರ ಹೆಗಡೆಗೆ ಭಾರತೀಯ ಜನತಾ ಪಾರ್ಟಿ ನೋಟೀಸ್ ನೀಡಿದ ಬೆನ್ನಲ್ಲೆ ಅವರ ಪರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹ್ಯಾಶ್ ಟ್ಯಾಗ್ ಮೂಲಕ ಸಂದೇಶಗಳು ಹರಿದಾಡತೊಡಗಿವೆ.
ಚುನಾವಣೆ ವೇಳೆ ಹಿಂದೂ ಹಿಂದೂ ಎನ್ನುವ ಬಿಜೆಪಿ ಈಗ ಕಟ್ಟಾ ಹಿಂದೂವಾದಿ ಅನಂತಕುಮಾರ ಹೆಗಡೆಗೆ ನೋಟೀಸ್ ನೀಡುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಲಾಗುತ್ತಿದೆ. ಅನಂತಕುಮಾರ ಹೆಗಡೆ ಹಿಂದುತ್ವವಾದಿಯಾಗಿ ಬೆಳೆದುಬಂದ ಬಗ್ಗೆ ವಿವರ ನೀಡುವ ಜೊತೆಗೆ, ಅವರು ಎಂತಹ ಪರಿಸ್ಥಿತಿಯಲ್ಲೂ ಹಿಂದುತ್ವವನ್ನು ಬಿಟ್ಟವರಲ್ಲ, ಈಗಿನ ಡೋಂಗಿ ಹಿಂದುತ್ವವಾದಿಗಳಂತಲ್ಲ ಅವರು ಎಂದೂ ಬರೆಯಲಾಗಿದೆ.

 

ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಂದೇಶದ ಪೂರ್ಣ ಪಾಠ ಹೀಗಿದೆ – 

ಅನಂತ್ ಕುಮಾರ್ ಹೆಗಡೆ ಏನು ಮಾತನಾಡಿದರೂ “ನಾಲಿಗೆ ಹರಿ ಬಿಟ್ಟ ಅನಂತ್” ಎಂದು ದೊಡ್ಡದಾಗಿ ಕೆಲವು ಮಾಧ್ಯಮಗಳು ಬ್ರೇಕಿಂಗ್ ನ್ಯೂಸ್ ಮಾಡಿಬಿಡುತ್ತವೆ.! ಆದರೆ ವಿಪರ್ಯಾಸ ಏನು ಗೊತ್ತಾ ಅವರು ಹೇಳುವುದು ಸತ್ಯ ಹಾಗೂ ವಾಸ್ತವ.! ಈಗ ಅವರು ಹೇಳುವ ಮಾತುಗಳು ಬಿಜೆಪಿ ಅವರಿಗೇ ಸಹಿಸಲು ಸಾಧ್ಯವಾಗುತ್ತಿಲ್ಲ.!
ಎಲೆಕ್ಷನ್ ಸಮಯದಲ್ಲಿ ಹಿಂದೂ ಹಿಂದೂ ಎಂದು ಜಪ ಮಾಡುತ್ತಾ, ಈಗ ಅನಂತ್ ಕುಮಾರ್ ಹೆಗಡೆಗೆ ನೋಟಿಸ್ ನೀಡಿರುವುದು ಒಬ್ಬ ಹಿಂದೂವನ್ನು ಸುಮ್ಮನಿರು ಎಂದು ಹೇಳಿದಂತೆ ಆಗುವುದಿಲ್ಲವೇ.!? ನಿಮ್ಮ ನೋಟಿಸ್ ಗೆಲ್ಲ ಹೆದರುವ ಮಂದಿ ಅನಂತ್ ಕುಮಾರ್ ಹೆಗಡೆ ಅಲ್ಲವೇ ಅಲ್ಲ.! ನಿನ್ನೆಯೂ ಮೋನ್ನೆಯೂ ಅವರಲ್ಲಿ ಹಿಂದುತ್ವ ಬಂದಿಲ್ಲ.!  ಅವರ ಹಿಂದುತ್ವ ಎಂಥದ್ದು ಎಂಬುದರ ಬಗ್ಗೆ ಸಣ್ಣ ಮಾಹಿತಿ…
1. ಭಟ್ಕಳದ ಹಿಂದೂಗಳ ರಕ್ಷಣೆಗೆ ಆಪತ್ಬಾಂಧವನಂತೆ ಬಂದು ಜೀವದ ಹಂಗು ತೊರೆದು ಹೊರಾಡಿದ ವ್ಯಕ್ತಿಯ ಹೆಸರು ಅನಂತ ಕುಮಾರ ಹೆಗ್ಡೆ…….ನೆನಪಿಡಿ ಹೋರಾಟ ಎಂದರೆ ಗಂಟಿ ಹಿಡಿಯುವುದು, ಮುಂಡಾಸು ಕಟ್ಟಿ ವೇದಿಕೆಯ ಮೇಲೆ ಭಾಷಣ ಮಾಡುವುದು, ಕೆರೆ ಹೂಳೆತ್ತುವುದು, ಶಾಂತವಾಗಿರುವ ಪ್ರದೇಶದಲ್ಲಿ ಚರ್ಚಾ ಕಾರ್ಯಕ್ರಮ ನಡೆಸುವುದು, ವಿಚಾರ ಸಂಕೀರಣ ಏರ್ಪಡಿಸುವುದು, ಗಲಬೆ ಮುಗಿದ ಮೇಲೆ ಬಂದು ಸಾಂತ್ವನ ಮಾಡಿ ಪ್ರಚಾರ ತೆಗದುಕೊಂಡು ತಮ್ಮ ರಾಜಕೀಯ ಆಕಾಂಕ್ಷೆ ಈಡೇರಿಕೆಗೆ ತೆರೆಮರೆಯಲ್ಲಿ ಯತ್ನಿಸುವುದು ಇಂದಿನ ಬಹುತೇಕ ಹಿಂದು ಓರಾಟಗಾರರ ಕಾಯಕವಾಗಿದೆ.!?
2. ಭಟ್ಕಳ ಗಲಭೆಯಲ್ಲಿ ೧೪ ಹಿಂದುಗಳು ಮತ್ತು ೭ ಮುಸ್ಲಿಮರು ಹತರಾದರು. ಹತರಾದ ೭ ಮುಸ್ಲಿಮರ ಸಾವಿಗೆ ಅನಂತ ಕುಮಾರ ಹೆಗ್ಡೆಯೇ ಕಾರಣ ಎನ್ನುವ ಸುಳ್ಳು ಆರೋಪ ಹೋರಿಸಿದ ಸರಕಾರ ಮತ್ತು ಇಲಾಖೆ ಹೆಗ್ಡೆಯವರನ್ನು ೧೯೯೩ ರಲ್ಲಿ ಬಂಧಿಸಿ ಭಟ್ಕಳದ ಪೋಲಿಸ್ ಠಾಣೆಯಲ್ಲಿ ಥರ್ಡ್ ಗ್ರೆಡ್ ನ ಭಯಂಕರ ಹಿಂಸೆಗೆ ಒಳಪಡಿಸಿತು.
3. ಠಾಣೆಯ ಕೋಣೆಯೊಂದರಲ್ಲಿ ಭಟ್ಕಳದ ಹಿಂದೂ ನಾಯಕರನ್ನು ಕೂರಿಸಿದ್ದರೆ ಪಕ್ಕದ ಕೋಣೆಯಲ್ಲಿ ಅನಂತ ಕುಮಾರರ ಕಣ್ಣಿಗೆ ಬಟ್ಟೆ ಕಟ್ಟಿ, ಕೈಕಾಲುಗಳನ್ನು ಹಗ್ಗದಿಂದ ಬಿಗಿದು ನಿರಂತರ ಹಿಂಸೆಗೆ ಒಳಪಡಿಸಲಾಗುತ್ತಿತ್ತು. ಪೋಲಿಸ್ ಅಧಿಕಾರಿಗಳ ಯಮಯಾತನೆಯ ಹೊಡೆತ ತಾಳಲಾರದೆ ” ನಾನು ಯಾವ ದೇಶದ್ರೋಹದ ಕೆಲಸ ಮಾಡಿದ್ದೇನೆ ಎಂದು ನನಗೆ ಹೋಡೆಯುತ್ತಿದ್ದಿರಿ? ಹಿಂದೂಗಳ ಮೇಲೆ ನಡೆಯುತ್ತಿದ್ದ ದೌರ್ಜನ್ಯ ತಡೆಯಲು ನಾನು ಹೋರಾಡಿದ್ದು ತಪ್ಪೆ? ” ಎಂದು ಅನಂತ ಕುಮಾರ ಕೂಗಾಡುತ್ತಿದ್ದರೆ, ಹೊಡೆತದ ನೋವು ತಾಳಲಾರದೆ  ಅರಚಾಡುತ್ತಿದ್ದ ಅನಂತ ಕುಮಾರರ ಯಾತನಾಮಯ ಧ್ವನಿ ಪಕ್ಕದ ಕೋಣೆಯಲ್ಲಿದ್ದ ನಾಯಕರಿಗೆ ಸ್ಪಷ್ಟವಾಗಿ ಕೇಳಿಸುತ್ತಿತ್ತು. ಪೋಲಿಸ್ ಅಧಿಕಾರಿಗಳು ” ನಿನ್ನ ಚಿತ್ತರಂಜನ್ ಎಲ್ಲಿ? ನಿನ್ನ ಹಿಂದೂ ಸಂಘಟನೆ ಎಲ್ಲಿ? ಎಲ್ಲಿ ನಿನ್ನ ಬಿಜೆಪಿ? ಯಾರಾದರೂ ನಿನ್ನನ್ನು ರಕ್ಷಿಸಲು ಬಂದ್ರಾ ಈಗ? ನಿನಗೇಕೆ ಬೇಕು ಇದೆಲ್ಲ? ” ಎಂದು ಹೇಳುತ್ತ ಒಬ್ಬರ ನಂತರ ಒಬ್ಬರಂತೆ ಬಡಿಯುತ್ತಿದ್ದರು. ಅಂತಹ ಸಮಯದಲ್ಲೂ ಕೂಡ ನಿಮಗೆ ತಾಕತ್ತಿದ್ದರೆ ಒಬ್ಬೊಬ್ಬರೆ ಬನ್ನಿ ಎಂದು ಪೋಲಿಸರಿಗೆ ಸವಾಲೆಸೆದಿದ್ದರಂತೆ ಅನಂತ ಕುಮಾರ ಹೆಗ್ಡೆ.
4. ಭಟ್ಕಳ ಗಲಭೆಯಲ್ಲಿ ಪೋಲಿಸರಿಂದ ದೇಹ ನುಜ್ಜುಗುಜ್ಜಾಗಿಸಿಕೊಂಡು ನೋವನ್ನನುಭವಿಸುತ್ತಿದ್ದ ಅನಂತ ಕುಮಾರ ಹೆಗ್ಡೆ ಇನ್ನು ಸಂಘಟನೆ ಕೆಲಸ ಸಾಕಪ್ಪ ಎಂದು ರಾಜಕೀಯಕ್ಕೆ ಧುಮುಕಲಿಲ್ಲ.!
5. ಬದಲಾಗಿ ಮತ್ತೆ ಹಿಂದು ಸಂಘಟನೆಯ ಮೂಲಕ‌ ಹೋರಾಟಕ್ಕೆ ಇಳಿದರು. ಸರಕಾರದ ಕಂಡಲ್ಲಿ ಗುಂಡಿಕ್ಕುವ ಆಜ್ಞೆಯ ನಡುವೆಯೂ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಜೀವದ ಹಂಗು ತೊರೆದು ಯಶಸ್ವಿ ದ್ವಜಾರೋಹಣ ಮಾಡಿದರು. ಇವರನ್ನು ಮುಖಾಮುಖಿಯಲ್ಲಿ ಸಾಯಿಸಲಾಗುತ್ತದೆ ಎಂದು ಅರಿತಾಗ ರಕ್ಷಣೆಯ ಸಲುವಾಗಿ ಅವರನ್ನು ರಾಜಕೀಯಕ್ಕೆ ಕರೆತರಲಾಯಿತೇ ಹೊರತು ಅವರೆಂದೂ ರಾಜಕಾರಣ ಇಷ್ಟಪಟ್ಟವರಲ್ಲ.
ಗೊತ್ತಿಲ್ಲದವರು ಓದಿದ ನಂತರವಾದರೂ ಗೊತ್ತುಮಾಡಿಕೊಳ್ಳಿ, ಅನಂತ್ ಹೆಗಡೆ ಅವರ ಹಿಂದುತ್ವ ಏನು ಅಂತ.! ಸುಮ್ಮನೆ ಅವರಿಗೆ ಕೊಟ್ಟ ನೋಟಿಸ್ ಹಿಂಪಡೆಯಿರಿ. ಸಾವರ್ಕರ್ ಬಗ್ಗೆ ಮಾತನಾಡುವ ಕಾಂಗ್ರೆಸ್ ಹಾಗೂ ಇನ್ನಿತರ ಬಗ್ಗೆ ನೀವು ಕ್ರಮ ಕೈಗೊಳ್ಳಿ, ಪ್ರಖರ ಹಿಂದೂ ಅನಂತ್ ಅವರ ಮೇಲಲ್ಲ.!
#IStandWithAnantHegde

 

ಸಂಬಂಧಿಸಿದ ಸುದ್ದಿಗಳು –

ನಾನು ಎಲ್ಲಿಯೂ ಗಾಂಧಿ ಹೆಸರು ಹೇಳಿಲ್ಲ; ಕ್ಷಮೆ ಕೇಳುವ ಪ್ರಶ್ನೆಯಿಲ್ಲ

ಅನಂತಕುಮಾರ್ ಹೆಗಡೆಗೆ ಶೋಕಾಸ್ ನೋಟೀಸ್

ಸಂಸದೀಯ ಸಭೆಯಿಂದ ಅನಂತಕುಮಾರ ಹೆಗಡೆಗೆ ಗೇಟ್ ಪಾಸ್