Beereshwara Add 10
KLE1099 Add

ಮಹಾರಾಷ್ಟ್ರ ಸಚಿವನ ಬಂಧನ, 14 ದಿನ ಇಡಿ ವಶಕ್ಕೆ  

ದಾವೂದ್ ಇಬ್ರಾಹಿಂ ನಂಟು:

ಪ್ರಗತಿ ವಾಹಿನಿ ಸುದ್ದಿ ಮುಂಬೈ –  ಮಹಾರಾಷ್ಟ್ರದ ಸಚಿವ, ಎನ್‌ಸಿಪಿ ಮುಖಂಡ ನವಾಬ್ ಮಲಿಕ್‌ರನ್ನು ಮಾರ್ಚ್ ೩ರವರೆಗೆ ಇಡಿ ವಶಕ್ಕೆ ಒಪ್ಪಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಬುಧವಾರ ಆದೇಶ ಮಾಡಿದೆ.

ನವಾಬ್ ಮಲ್ಲಿಕ್ ಭೂಗತ ದೊರೆ ದಾವೂದ್ ಇಬ್ರಾಹಿಂಗೆ ಸಂಬಂಧಿಸಿದ ಅಕ್ರಮ ಹಣದ ವ್ಯವಹಾರದಲ್ಲಿ ತೊಡಗಿಕೊಂಡಿದ್ದ ಆರೋಪದಲ್ಲಿ ಜಾರಿ ನಿರ್ದೇಶನಾಲಯವು (ಇಡಿ) ಅವರನ್ನು ಬಂಧಿಸಿತ್ತು. ಬಳಿಕ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಈ ಕುರಿತು ವಿಚಾರಣೆ ನಡೆದು, ನ್ಯಾಯಾಲಯವು ಹೆಚ್ಚಿನ ತನಿಖೆಯ ಸಲುವಾಗಿ ಅವರನ್ನು ಮಾರ್ಚ್ ೩ರವರೆಗೆ ಇಡಿ ವಶದಲ್ಲಿ ಒಪ್ಪಿಸಿದೆ.

ಇಡಿ ವಶದಲ್ಲಿ ಇರುವ ಸಂದರ್ಭದಲ್ಲಿ ನವಾಬ್ ಮಲ್ಲಿಕ್‌ಗೆ ಅವರ ಮನೆಯಿಂದಲೇ ಆಹಾರ ಮತ್ತು ಔಷಧ ಪೂರೈಸಲು ಮತ್ತು ವಿಚಾರಣೆಯ ವೇಳೆ ಮಲಿಕ್‌ರ ವಕೀಲರು ಹಾಜರಿರಲು ಒಪ್ಪಿಗೆ ಕೇಳಲಾಗಿದ್ದು ಈ ಕುರಿತು ನ್ಯಾಯಾಲಯವು ಗುರುವಾರ ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿದು ಬಂದಿದೆ.

ಆಯುಧಗಳನ್ನು ಕೈಗೆತ್ತಿಕೊಳ್ಳುವುದನ್ನು ನಮಗೆ ಯಾರೂ ಹೇಳಿಕೊಡಬೇಕಿಲ್ಲ – ಅರವಿಂದರಾವ್ ದೇಶಪಾಂಡೆ ಎಚ್ಚರಿಕೆ

You cannot copy content of this page