ವೀಡಿಯೋ, ದರೋಡೆಕೋರರೊಂದಿಗೆ ಸೆಣಸಿದ ಧೈರ್ಯಶಾಲಿ ವೃದ್ಧ ದಂಪತಿಗಳು

Watch Video, Brave Elderly couple fight off armed robbers

ವೀಡಿಯೋ, ದರೋಡೆಕೋರರೊಂದಿಗೆ ಸೆಣಸಿದ ಧೈರ್ಯಶಾಲಿ ವೃದ್ಧ ದಂಪತಿಗಳು

  • ತಮಿಳುನಾಡಿನಲ್ಲಿ ಧೈರ್ಯಶಾಲಿ ವೃದ್ಧ ದಂಪತಿಗಳು ಶಸ್ತ್ರಸಜ್ಜಿತ ದರೋಡೆಕೋರರೊಂದಿಗೆ ಹೋರಾಟ ನಡೆಸಿ, ಅವರನ್ನು ಹಿಮ್ಮೆಟ್ಟಿದ ಘಟನೆ ನಡೆದಿದೆ.

ಪ್ರಗತಿವಾಹಿನಿ ಸುದ್ದಿ – ಮಧುರೈ : ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ವೃದ್ಧರು ಭಾನುವಾರ ರಾತ್ರಿ ಕತ್ತು ಹಿಸುಕಲು ಯತ್ನಿಸಿದ ಇಬ್ಬರು ಸಶಸ್ತ್ರ ದರೋಡೆಕೋರರ ವಿರುದ್ಧ ಹೋರಾಡಿ ಜಯಿಸಿದ್ದಾರೆ. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ವೃದ್ಧರ ದೈರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

75 ವರ್ಷದ ಷಣ್ಮುಗವೇಲ್ ಮತ್ತು ಅವರ ಪತ್ನಿ ಸೆಂಥಮರೈ (68) ಅವರು ರಾತ್ರಿ ಊಟ ಮುಗಿಸಿ, ಕಡಾಯಂನ ತಮ್ಮ ತೋಟದ ಮನೆಯ ಹೊರಗೆ ಕುಳಿತಿದ್ದರು. ಅಷ್ಟರಲ್ಲಿ ವೃದ್ಧ ಷಣ್ಮುಗವೇಲ್ ಹಿಂಬದಿಯಿಂದ ಬಂದ ದರೋಡೆಕೋರ ಟವೆಲ್ನಿಂದ ಕತ್ತು ಹಿಸುಕಲು ಪ್ರಯತ್ನಿಸಿದ. ಷಣ್ಮುಗಾವೆಲ್ ಅವರ ಕೂಗು ಕೇಳಿ, ಸೆಂಥಮರೈ ಹೊರಬಂದು, ತಕ್ಷಣವೇ ಹೊರಾಂಡಾದಲ್ಲಿದ್ದ ಕೈಗೆ ಸಿಕ್ಕ ವಸ್ತುಗಳನ್ನೆಲ್ಲಾ ದರೋಡೆಕೋರರ ಮೇಲೆ ಬಿಸಾಡಲು ಪ್ರಾರಂಭಿಸಿದ್ದಾರೆ..

ಚಪ್ಪಲಿ, ಕುರ್ಚಿಗಳು ಮತ್ತು ಇತರ ವಸ್ತುಗಳನ್ನು ಎಸೆಯಲು ಪ್ರಾರಂಭಿಸಿದ್ದಾರೆ, ಮತ್ತು ಷಣ್ಮುಗವೇಲ್ ತನ್ನನ್ನು ತಾನು ದರೋಡೆಕೋರನಿಂದ ತಪ್ಪಿಸಿಕೊಳ್ಳಲು ಯಶಸ್ವಿಯಾಗಿದ್ದಾರೆ, ಅಷ್ಟರಲ್ಲಿ ಇದ್ದಕ್ಕಿದ್ದಂತೆ, ಮುಖವಾಡದ ಇನ್ನೊಬ್ಬ ವ್ಯಕ್ತಿ ಕೂಡ ಆಕ್ರಮಣ ಮಾಡಲು ಮುಂದಾಗಿದ್ದಾನೆ.

ಧೈರ್ಯ ಕಳೆದು ಕೊಳ್ಳದ ದಂಪತಿಗಳು ದರೋಡೆಕೋರರನ್ನು ಕುರ್ಚಿಗಳು ಮತ್ತು ಇತರ ವಸ್ತುಗಳೊಂದಿಗೆ ಹಿಮ್ಮೆಟ್ಟಿದ್ದಾರೆ. ವೃದ್ಧರ ಆ ಆಕ್ರಮಣಕ್ಕೆ ದರೋಡೆಕೋರರಿಗೆ ಅಲ್ಲಿಂದ ಓಡಿಹೋಗುವುದನ್ನು ಬಿಟ್ಟು ಬೇರೆ ದಾರಿಯಿರಲಿಲ್ಲ. ಸಿಸಿಟಿವಿ ಕ್ಯಾಮೆರಾ ಇಡೀ ದೃಶ್ಯಾವಳಿಯನ್ನು ದಾಖಲಿಸಿದೆ.

ಸಧ್ಯ ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ದರೋಡೆಕೋರರಲ್ಲಿ ಒಬ್ಬನನ್ನು ಗುರುತಿಸಿದ ಕಡಾಯಂ ಪೊಲೀಸರು, ಶೀಘ್ರದಲ್ಲೇ ಇಬ್ಬರನ್ನು ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ../////