ಅತ್ಯಾಚಾರ ಯತ್ನ ವಿಫಲ, ಮಹಿಳೆಗೆ ಬೆಂಕಿಯಿಟ್ಟ ಮಾವ

WOMAN SET ON FIRE BY BROTHER-IN-LAW

ಅತ್ಯಾಚಾರ ಯತ್ನ ವಿಫಲ, ಮಹಿಳೆಗೆ ಬೆಂಕಿಯಿಟ್ಟ ಮಾವ

ಪ್ರಗತಿವಾಹಿನಿ ಸುದ್ದಿ : ಅತ್ಯಾಚಾರ ಪ್ರಯತ್ನ ವಿಫಲವಾದ ನಂತರ, ಸಂಬಂಧದಲ್ಲಿ ಸಹೋದರನ, ಹೆಂಡತಿಗೆ ಬೆಂಕಿ ಹಚ್ಚಿದ ಆರೋಪದ ಮೇಲೆ 25 ವರ್ಷದ ಯುವಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೂನ್ 11 ರಂದು ಈ ಘಟನೆ ನಡೆದಿದ್ದು, ಘಟನೆಯ ನಂತರ ಸುಟ್ಟ ಗಾಯಗಳಿಂದಾಗಿ ಸಂತ್ರಸ್ತೆಗೆ ಮಾತನಾಡಲು ಸಾಧ್ಯವಾಗದ ಕಾರಣ, ದೂರು ದಾಖಲಿಸುವಲ್ಲಿ ವಿಳಂಬವಾಗಿದೆ. “ನನ್ನ ತಂಗಿ ಇದೀಗ ಸುಧಾರಿಸುತ್ತಿದ್ದಾಳೆ. ನಮ್ಮೊಂದಿಗೆ ಮಾತನಾಡಿದ್ದಾಳೆ, ಎಂದು “ದೂರು ದಾಖಲಿಸಿದ ಸಂತ್ರಸ್ತೆಯ ಸಹೋದರ ತಿಳಿಸಿದ್ದಾನೆ.

ಅತ್ಯಾಚಾರದ ಪ್ರಯತ್ನ ವಿಫಲವಾದ ನಂತರ ತನ್ನ ಸೋದರ ಮಾವ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ಸಂತ್ರಸ್ತೆ ಹೇಳಿಕೆಯಲ್ಲಿ ತಿಳಿಸಿದ್ದಾಳೆ. ಘಟನೆಯಿಂದ ಆಕೆ ಶೇಕಡಾ 80% ಕ್ಕೂ ಹೆಚ್ಚು ಸುಟ್ಟಿದ್ದಾಳೆ, ಪ್ರಸ್ತುತ ಬರೇಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

“ಮೇ 2016 ರಲ್ಲಿ ಮದುವೆಯಾದಾಗಿನಿಂದ, ನನ್ನ ತಂಗಿ ತನ್ನ ಸೋದರ ಮಾವನ ಕಿರುಕುಳಕ್ಕೆ ಹೆದರುತ್ತಿದ್ದಳು ಮತ್ತು ಅವಳು ತನ್ನ ಗಂಡನಿಗೆ ಈ ಬಗ್ಗೆ ಮಾಹಿತಿ ನೀಡಿದಾಗ ಅವನು ಈಕೆಯನ್ನೇ ದೂಷಿಸಿದ್ದನು, ಅವನ ಕುಟುಂಬ ಸದಸ್ಯರ ಬೆಂಬಲದೊಂದಿಗೆ, ಅವಳ ಸೋದರ ಮಾವ ಅವಳ ಮೇಲೆ ಸೀಮೆಎಣ್ಣೆ ಸುರಿದು ಅತ್ಯಾಚಾರ ವಿಫಲವಾದ ನಂತರ ಅವಳಿಗೆ ಬೆಂಕಿಯಿಟ್ಟನು ”ಎಂದು ಸಂತ್ರಸ್ತೆಯ ಸಹೋದರ ಹೇಳಿಕೆ ನೀಡಿದ್ದಾನೆ.

ಕೊಲೆ ಯತ್ನಕ್ಕೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307 ರ ಅಡಿಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ./////