*9 ವರ್ಷಗಳ ಸಂಬಂಧಕ್ಕೆ ಮದುವೆಯೇ ಮುಳುವಾಯಿತೇ?*: *ದೇವಸ್ಥಾನಕ್ಕೆ ಹೋದ ಮಹಿಳೆಯ ಭೀಕರ ಹತ್ಯೆ*

ಪ್ರಗತಿವಾಹಿನಿ ಸುದ್ದಿ: ಒಂಬತ್ತು ವರ್ಷಗಳಿಂದ ಇಬ್ಬರ ನಡುವೆ ಸಂಬಂಧವಿತ್ತು. ಆದರೆ ಯುವಕ ಬೇರೊಬ್ಬ ಯುವತಿಯನ್ನು ಮದುವೆಯಾಗಲು ನಿರ್ಧರಿಸಿದಾಗ ಪರಿಸ್ಥಿತಿಯೇ ಬದಲಾಗಿದೆ. ಮದುವೆ ವಿಚಾರವಾಗಿ ಇಬ್ಬರ ನಡುವೆ ಕಲಹ ಆರಂಭವಾಗಿದೆ. ದೇವಸ್ಥಾನಕ್ಕೆ ಹೋದ ಮಹಿಳೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾಳೆ. ಇದೀಗ ಪೊಲೀಸರ ತನಿಖೆಯಲ್ಲಿ ಆಕೆಯ ನಾಪತ್ತೆಯ ಹಿಂದಿನ ಭಯಾನಕ ಘಟನೆ ಬಯಲಾಗಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚನ್ಯಾನದಡ್ಡಿ ಗ್ರಾಮದ ಹೊರವಲಯದಲ್ಲಿ ಘಟನೆ ನಡೆದಿದೆ. ಕೊಲೆಯಾದ ಮಹಿಳೆಯನ್ನು ನನದಿ ಗ್ರಾಮದ ಐರಾವತಿ ಖೋತ (38) ಎಂದು ಗುರುತಿಸಲಾಗಿದೆ. ಕೊಲೆ ಆರೋಪದ … Continue reading *9 ವರ್ಷಗಳ ಸಂಬಂಧಕ್ಕೆ ಮದುವೆಯೇ ಮುಳುವಾಯಿತೇ?*: *ದೇವಸ್ಥಾನಕ್ಕೆ ಹೋದ ಮಹಿಳೆಯ ಭೀಕರ ಹತ್ಯೆ*