*ದಸರಾ ಸಂಭ್ರಮಕ್ಕೆ ತೆರೆ*: *ಚಿನ್ನದ ಅಂಬಾರಿ ಹೊತ್ತ ಪ್ರಶಾಂತ ಸೇರಿದಂತೆ ಗಜಪಡೆ ಕಾಡಿನತ್ತ ಪ್ರಯಾಣ!*

ಪ್ರಗತಿವಾಹಿನಿ ಸುದ್ದಿ: ಮೈಸೂರು ದಸರಾ ಸಂಭ್ರಮ ಮುಗಿದಿದೆ. ಚಿನ್ನದ ಅಂಬಾರಿ ಹೊತ್ತು ಗಮನ ಸೆಳೆದ ಕ್ಯಾಪ್ಟನ್ ಪ್ರಶಾಂತ ಸೇರಿದಂತೆ ಗಜಪಡೆ ಇಂದು ಅರಮನೆಗೆ ವಿದಾಯ ಹೇಳಿ, ತಮ್ಮ ಅರಣ್ಯ ಶಿಬಿರಗಳತ್ತ ಮರಳಿದೆ. ಕಳೆದ ಎರಡು ತಿಂಗಳಿನಿಂದ ಮೈಸೂರಿನ ಅರಮನೆ ಆವರಣದಲ್ಲಿ ನೆಲೆಸಿದ್ದ ದಸರಾ ಆನೆಗಳು ಇಂದು ಲಾರಿಗಳನ್ನೇರಿ ತಮ್ಮ ತಮ್ಮ ಶಿಬಿರಗಳತ್ತ ಪ್ರಯಾಣ ಬೆಳೆಸಿವೆ. ಲಕ್ಷಾಂತರ ಜನರ ಕಣ್ಮನ ಸೆಳೆದ ಜಂಬೂಸವಾರಿ ಯಶಸ್ವಿಯಾಗಿ ಮುಗಿದಿದ್ದು, ಗಜಪಡೆಯ ವಿದಾಯದೊಂದಿಗೆ ಈ ವರ್ಷದ ದಸರಾ ಅಧ್ಯಾಯವೂ ಮುಕ್ತಾಯಗೊಂಡಿದೆ. ಕಾಡಿನಿಂದ ನಾಡಿಗೆ … Continue reading *ದಸರಾ ಸಂಭ್ರಮಕ್ಕೆ ತೆರೆ*: *ಚಿನ್ನದ ಅಂಬಾರಿ ಹೊತ್ತ ಪ್ರಶಾಂತ ಸೇರಿದಂತೆ ಗಜಪಡೆ ಕಾಡಿನತ್ತ ಪ್ರಯಾಣ!*