
ಜಿಲ್ಲಾ ಉಸ್ತುವಾರಿ: ಬೆಳಗ್ಗೆ ಅದಲು -ಬದಲು, ಸಂಜೆ ಆದೇಶ ವಾಪಸ್!
District in-charge: Change in the morning, withdrawn the order in the evening!


ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯ ಸರಕಾರದಲ್ಲಿ ಶನಿವಾರ ಮತ್ತೊಂದು ಡ್ರಾಮಾ ನಡೆಯಿತು. ಜಿಲ್ಲಾ ಉಸ್ತುವಾರಿ ಸಚಿವರಿಬ್ಬರನ್ನು ಅದಲು -ಬದಲು ಮಾಡಿ ಶನಿವಾರ ಬೆಳಗ್ಗೆ ಆದೇಶ ಹೊರಡಿಸಲಾಯಿತು. ಆದರೆ ಸಂಜೆಯ ಹೊತ್ತಿಗೆ ಆ ಆದೇಶವನ್ನೇ ವಾಪಸ್ ಪಡೆಯಲಾಯಿತು.
ವಿಜಯ ನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜನೆವರಿ ತಿಂಗಳಲ್ಲಿ ನೇಮಕವಾಗಿದ್ದ ಶಶಿಕಲಾ ಜೊಲ್ಲೆಯವರನ್ನು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಿ, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಆನಂದ ಸಿಂಗ ಅವರನ್ನು ವಿಜಯ ನಗರ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಿ ಶನಿವಾರ ಬೆಳಗ್ಗೆ ಆದೇಶ ಹೊರಡಿಸಲಾಗಿತ್ತು.
ಆದರೆ ಸಂಜೆಯ ಹೊತ್ತಿಗೆ ಈ ಆದೇಶವನ್ನು ವಾಪಸ್ ಪಡೆದು ಮೊದಲಿನಂತೆಯೇ ಶಶಿಕಲಾ ಜೊಲ್ಲೆಯವರನ್ನು ವಿಜಯನಗರಕ್ಕೆ, ಆನಂದ ಸಿಂಗ್ ಅವರನ್ನು ಕೊಪ್ಪಳಕ್ಕೆ ಉಸ್ತುವಾರಿ ಸಚಿವರನ್ನಾಗಿ ಮುಂದುವರಿಸಲಾಯಿತು.
ಗಮನಿಸಿ:
ವಿಜಯನಗರ ಉಸ್ತುವಾರಿ – ಶಶಿಕಲಾ ಜೊಲ್ಲೆ
ಕೊಪ್ಪಳ ಉಸ್ತುವಾರಿ – ಆನಂದ ಸಿಂಗ್
ಸಧ್ಯಕ್ಕೆ ಇದೇ ಫೈನಲ್!!
ಜಿಲ್ಲೆಗಳಿಗೆ ಉಸ್ತುವಾರಿ ಕಾರ್ಯದರ್ಶಿಗಳ ನೇಮಕ: ಸರಕಾರದ ಆದೇಶ

ನಿಖರ, ನಿರಂತರ ಮತ್ತು ನಿಷ್ಪಕ್ಷಪಾತ ಸುದ್ದಿಗಳಿಗಾಗಿ ಪ್ರಗತಿವಾಹಿನಿ ಗ್ರುಪ್ ಸೇರಲು NEWS ಎಂದು ಟೈಪ್ ಮಾಡಿ 8197712235 ನಂಬರ್ ಗೆ ವಾಟ್ಸಪ್ ಮಾಡಿ.
ದಯವಿಟ್ಟು ನಮ್ಮ YouTube ಚಾನೆಲ್ ಗೆ ಸಬ್ ಸ್ಕ್ರೈಬ್ ಮಾಡಿ