Yoga add Final 1
KLE1099 Add

ಹುಬ್ಬಳ್ಳಿ: ಮಧ್ಯರಾತ್ರಿ ಕೇಕ್ ಕತ್ತರಿಸಿ ಸಿದ್ದರಾಮಯ್ಯ ಜನ್ಮ ದಿನಾಚರಣೆ: ಡಿಕೆಶಿಗೆ ಕೇಕ್ ತಿನ್ನಿಸಿದ ಸಿದ್ದರಾಮಯ್ಯ ನೀಡಿದ ಮೊದಲ ಸಂದೇಶವೇನು ಗೊತ್ತೇ?

Hubli: Cut a cake at midnight Siddaramaiah's birthday celebration: Do you know what Siddaramaiah said when DK was first fed cake?

GIT Add 3
Beereshwara add 12

ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ – ಹುಬ್ಬಳ್ಳಿಯ ಖಾಸಗಿ ಹೊಟೆಲ್ ನಲ್ಲಿ ಮಂಗಳವಾರ ಮಧ್ಯರಾತ್ರಿ ಕೇಕ್ ಕತ್ತರಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 75ನೇ ಜನ್ಮದಿನವನ್ನು ಆಚರಿಸಲಾಯಿತು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ, ಮಾಜಿ ಸಚಿವರಾದ ಆರ್.ವಿ.ದೇಶಪಾಂಡೆ, ಕೆ.ಜೆ. ಜಾರ್ಜ್, ವಿಧಾನ ಪರಿಷತ್ ಸದಸ್ಯರಾದ ಬಿ.ಕೆ.ಹರಿಪ್ರಸಾದ, ಚನ್ನರಾಜ ಹಟ್ಟಿಹೊಳಿ,  ಮುಖಂಡರಾದ ಸಲೀಂ ಅಹ್ಮದ್, ಎನ್.ಎಚ್.ಕೋನರಡ್ಡಿ, ಗಿರೀಶ್ ಗದಿಗೆಪ್ಪ ಗೌಡರ್ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.

ಸಿದ್ದರಾಮಯ್ಯ ಅವರು ಕೇಕ್ ಕತ್ತರಿಸಿ ಮೊದಲು ಡಿ.ಕೆ.ಶಿವಕುಮಾರ ಅವರಿಗೆ ತಿನಿಸಿದರು. “ನಾವೆಲ್ಲರೂ ಒಂದೇ , ನಾವೆಲ್ಲರೂ ಅಣ್ಣ ತಮ್ಮಂದಿರಂತೆ ಇರೋಣ” ಎನ್ನುವ ಸಂದೇಶವನ್ನು ಸಿದ್ದರಾಮಯ್ಯ ಜನ್ಮದಿನದ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ ಮತ್ತು ಕಾಂಗ್ರೆಸ್ಸಿಗರಿಗೆ ರವಾನಿಸಿದರು.

ಬುಧವಾರ ದಾವಣಗೆರೆಯಲ್ಲಿ ಸಿದ್ದರಾಮಯ್ಯನವದ 75ನೇ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಲು ಸಿದ್ಧತೆ ನಡೆದಿದೆ. 6 ಲಕ್ಷಕ್ಕಿಂತ ಹೆಚ್ಚು ಜನರು ಪಾಲ್ಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಸಂಸದ ರಾಹುಲ್ ಗಾಂಧಿ ಸಹ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.

ಸಿದ್ದರಾಮೋತ್ಸವಕ್ಕೆ ಬೆಳಗಾವಿಯಿಂದ 3 ಕಿಮೀ ಉದ್ದದ ಫೋಟೋ ಬಯೋಗ್ರಫಿ

ಸಿದ್ದರಾಮೋತ್ಸವವಲ್ಲ, ಸಿದ್ದರಾಮ ದೇವರ ಉತ್ಸವಕ್ಕೆ ಹೋಗುತ್ತೇನೆ; ಟಾಂಗ್ ನೀಡಿದ ಸಿಎಂ

Home add- Bottom