GIT add 2024-1
Laxmi Tai add
Beereshwara 33

ಕಾಗವಾಡದಲ್ಲಿ ಬಿಜೆಪಿಗೆ ಕಾಗೆ ಕಂಟಕ

ರಾಜು ಕಾಗೆ ನಾಳೆ ಬೆಳಗ್ಗೆ ಅಭಿಮಾನಿಗಳ ಸಭೆ ಕರೆದಿದ್ದಾರೆ

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ, ಕಾಗವಾಡ – ಕಾಂಗ್ರೆಸ್, ಜೆಡಿಎಸ್ ಶಾಸಕರನ್ನೆಲ್ಲ ಬಳಸಿಕೊಂಡು ಅತ್ಯುತ್ಸಾಹದಲ್ಲಿ  ಸರಕಾರ ರಚನೆ ಮಾಡಿರುವ ಭರಾತೀಯ ಜನತಾಪಾರ್ಟಿಗೆ ಈಗ ಉಪಚುನಾವಣೆಯ ಕಂಟಕ ಎದುರಾಗಿದೆ.

ಅಕ್ಟೋಬರ್ 21ರಂದು ನಡೆಯಲಿರುವ 15 ಕ್ಷೇತ್ರಗಳ ಉಪಚುನಾವಣೆ ಸಂದರ್ಭದಲ್ಲಿ ಅನರ್ಹರನ್ನು ಸಮಾಧಾನಪಡಿಸುವುದೋ, ಸ್ವಪಕ್ಷೀಯ ಅಸಮಾಧಾನಿತರನ್ನು ಸಮಾಧಾನಪಡಿಸುವೋ ಗೊಂದಲ, ಸಂಕಷ್ಟದಲ್ಲಿ ಬಿಜೆಪಿ ನಾಯಕರಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ 3 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಮೂರರಲ್ಲೂ ಈಗ ಬಿಜೆಪಿಗೆ ಭಿನ್ನಮತದ ಸಮಸ್ಯೆ ಎದುರಾಗಿದೆ. ಗೋಕಾಕದಲ್ಲಿ ಅಶೋಕ ಪೂಜಾರಿ, ಅಥಣಿಯಲ್ಲಿ ಲಕ್ಷ್ಮಣ ಸವದಿ ಹಾಗೂ ಕಾಗವಾಡದಲ್ಲಿ ರಾಜು ಕಾಗೆ ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತವರು. ಈಗ ಅವರಿಗೆ ಟಿಕೆಟ್ ಕೊಡುವುದೋ ಅನರ್ಹ ಶಾಸಕರಿಗೆ ಅಥವಾ ಅವರು ಹೇಳಿದವರಿಗೆ ಟಿಕೆಟ್ ಕೊಡುವುದೋ ಗೊಂದಲ ಬಿಜೆಪಿಯಲ್ಲಿದೆ.

ರಾಜು ಕಾಗೆ ನಾಳೆ ಅಭಿಮಾನಿಗಳ ಸಭೆ

ಗೋಕಾಕದಲ್ಲಿ ಅಶೋಕ ಪೂಜಾರಿ ಈಗಾಗಲೆ ಕ್ಷೇತ್ರ ಸುತ್ತಲು ಆರಂಭಿಸಿದ್ದಾರೆ. ಕಾರ್ಯಕರ್ತರ ಅಭಿಪ್ರಾಯ ಕೇಳಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಅವರು ಅನ್ಯ ಪಕ್ಷಗಳಿಂದ ಚುನಾವಣೆ ಕಣಕ್ಕಳಿದರೂ ಆಶ್ಚರ್ಯವಿಲ್ಲ.

ಕಾಗವಾಡದಲ್ಲಿ ರಾಜು ಕಾಗೆ ಚುನಾವಣೆ ತಯಾರಿ ಆರಂಭಿಸಿದ್ದಾರೆ. ಕಾಗೆಗೇ ಟಿಕೆಟ್ ನೀಡಬೇಕೆಂದು ಅವರ ಅಭಿಮಾನಿಗಳು ಪಟ್ಟು ಹಿಡಿದಿದ್ದಾರೆ. ಅನರ್ಹ ಶಾಸಕ ಶ್ರೀಮಂತ ಪಾಟೀಲ ಅಥವಾ ಅವರ ಪುತ್ರ ಶ್ರೀನಿವಾಸ ಪಾಟೀಲ ಅವರಿಗೆ ಬಿಜೆಪಿ ಟಿಕೆಟ್ ನೀಡುವುದು ಅನಿವಾರ್ಯವಾಗಿದೆ. ಹಾಗಾದಲ್ಲಿ ರಾಜುಕಾಗೆ ಬಂಡಾಯವೇಳುವ ಸಾಧ್ಯತೆ ಇದೆ.

Emergency Service

ಸಭೆಯ ನೋಟೀಸ್

ರಾಜು ಕಾಗೆ ನಾಳೆ ಬೆಳಗ್ಗೆ ಅಭಿಮಾನಿಗಳ ಸಭೆ ಕರೆದಿದ್ದಾರೆ. ಈ ಸಂಬಂಧ ಅವರು ಕಾರ್ಯಕರ್ತರಿಗೆ ಸಂದೇಶ ರವಾನಿಸಿದ್ದಾರೆ,

“ಕಾಗವಾಡ ವಿಧಾನ ಸಭಾ ಮತ ಕ್ಷೇತ್ರದ ಅಭಿವ್ರದ್ಧಿಗಾಗಿ ಉಪಚುನಾವಣೆ ತಯಾರಿ ನಡೆಸಲು ನಿಷ್ಟಾವಂತ ರಾಜು ಕಾಗೆ ಅಭಿಮಾನಿ ಬಂಧುಗಳು, ಎಲ್ಲಾ ಬಿಜೆಪಿ  ಕಾರ್ಯಕರ್ತರು ಮುಖಂಡರು, ಕಾಗವಾಡ ಅಭಿವೃದ್ಧಿ ಹಿತ ಚಿಂತಕರು, ರೈತ ಬಾಂಧವರು, ಕಾಲೇಜು ವಿದ್ಯಾರ್ಥಿ/ ವಿದ್ಯಾರ್ಥಿನಿಯರು, ಯುವಕ ಮಿತ್ರರು, ನೌಕರ ಮಿತ್ರರು, ಹಿತೈಶಿಗಳು ಹಾಗೂ ಎಲ್ಲ ಬಿಜೆಪಿಯ ಪದಾಧಿಕಾರಿಗಳು, ಮಹಿಳಾ ಘಟಕಗಳು  ನಾಳೆ ದಿನಾಂಕ 24/09/2019  ಮಂಗಳವಾರ ಮುಂಜಾನೆ ಸರಿಯಾಗಿ 10  ಗಂಟೆಗೆ ಕಟಗೇರಿ ಬಂಧುಗಳ ನೀಲಾಂಬಿಕಾ ಕಾರ್ಯಾಲಯದಲ್ಲಿ  ಬಂದು ತಮ್ಮ ಅಭಿಪ್ರಾಯವನ್ನುತಿಳಿಸಲು ಕೋರುತ್ತೇನೆ” ಎಂದು ಸಂದೇಶ ರವಾನಿಸಲಾಗಿದೆ.
ಇದೇ ಸಭೆಯಲ್ಲಿ ಅವರು ತಮ್ಮ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ. ಅಥವಾ ಪಕ್ಷಕ್ಕೆ ಎಚ್ಚರಿಕೆಯ ಗಡುವು ನೀಡಲೂ ಬಹುದು. ಸಧ್ಯದ ಲಕ್ಷಣ ನೋಡಿದರೆ ರಾಜು ಕಾಗೆ ಬಿಜೆಪಿ ವಿರುದ್ಧ ಬಂಡೆದ್ದು ಚುನಾವಣೆಗೆ ನಿಲ್ಲುವುದು ಖಚಿತ. ಕಾಂಗ್ರೆಸ್ ಕೂಡ ಅವರ ಮೇಲೆ ಕಣ್ಣಿಟ್ಟಿದೆ. ಕಾಂಗ್ರೆಸ್ ನಿಂದ ಪ್ರಕಾಶ ಹುಕ್ಕೇರಿ ಕೂಡ ಆಕಾಂಕ್ಷಿಗಳಾಗಿದ್ದಾರೆ. ಹಾಗಾದಲ್ಲಿ ಕಾಗೆಗೆ ಜೆಡಿಎಸ್ ಆಫರ್ ಕೊಡಬಹುದು.
ಒಟ್ಟಾರೆ, ಸಿಕ್ಕವರನ್ನೆಲ್ಲ ಸೆಳೆದುಕೊಂಡು ಸರಕಾರ ಮಾಡಿದ ಬಿಜೆಪಿ ಈಗ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಬಂಡಾಯ ಎದುರಿಸಬೇಕಾದ ಸಂಕಷ್ಟಕ್ಕೆ ಸಿಲುಕಿದೆ.
Bottom Add3
Bottom Ad 2