Athani Takkennavar
Beereshwara13
GIT add4

​ಸದನದ ಒಳಗೂ-ಹೊರಗೂ ಪ್ರತಿಧ್ವನಿಸಿದ PayCM ಪೋಸ್ಟರ್ ಗದ್ದಲ

 ನಾಳೆ ಕೈ ಕಾರ್ಯಕರ್ತರೊಂದಿಗೆ ನಾನೇ ಪೋಸ್ಟರ್ ಅಂಟಿಸುತ್ತೇನೆ ತಾಕತ್ತಿದ್ದರೆ ಬಂ​ಧಿ​ಸಿ ಎಂದ ಸಿದ್ದರಾಮಯ್ಯ

KLE1099 Add

 ನಾಳೆ ಕೈ ಕಾರ್ಯಕರ್ತರೊಂದಿಗೆ ನಾನೇ ಪೋಸ್ಟರ್ ಅಂಟಿಸುತ್ತೇನೆ ತಾಕತ್ತಿದ್ದರೆ ಬಂ​ಧಿ​ಸಿ ಎಂದ ಸಿದ್ದರಾಮಯ್ಯ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ, ಭ್ರಷ್ಟಾಚಾರ ಆರೋಪ ಮಾಡುತ್ತಿರುವ ಕಾಂಗ್ರೆಸ್ ಬೆಂಗಳೂರಿನಲ್ಲಿ  ಪೇಸಿಎಂ ಪೋಸ್ಟರ್ ಅಭಿಯಾನ ಆರಂಭಿಸಿ, ಗೋಡೆಗಳ ಮೇಲೆ ಸಿಎಂ  ಬಸವರಾಜ್ ಬೊಮ್ಮಾಯಿ ಭಾವಚಿತ್ರದ ಜೊತೆಗೆ ಕ್ಯೂ ಆರ್ ಕೋಡ್ ಪೋಸ್ಟರ್ ಅಂಟಿಸಿದ್ದು, ಸದನದ ಒಳಗೂ ಹಾಗೂ ಹೊರಗೂ ಆ​ಡ​ಳಿತ ಪಕ್ಷ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್ ನಾಯಕರ ಜಟಾಪಟಿಗೆ ಕಾರಣವಾಗಿದೆ.
 ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಅವಮಾನ ಮಾಡಿದ ಹಿನ್ನೆಲೆಯಲ್ಲಿ ಇದೀಗ ಪೇ ಸಿಎಂ ಅಭಿಯಾನದ ಮೂಲಕ ಪೋಸ್ಟರ್ ಹಾಕಿದ್ದ ಪ್ರಕರಣ ಸಂಬಂಧ,  ಕಾಂಗ್ರೆಸ್ ಸೋಷಿಯಲ್ ಮೀಡಿಯಾ ಚೀಫ್ ಬಿ.ಆರ್.ನಾಯ್ದು, ಅರುಣ್ ಸೇರಿದಂತೆ ಐವರನ್ನು ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಕಾರ್ಯಕರ್ತರ ಬಂಧನ ಖಂಡಿಸಿ ವಿಧಾನಪರಿಷತ್ ನಲ್ಲಿ ವಿ​ಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಲಾಪ ಆರಂಭವಾಗುತ್ತಿದ್ದಂತೆಯೇ ಪೇಸಿಎಂ ಪೋಸ್ಟರ್ ಗಳನ್ನು ಪ್ರದರ್ಶಿಸಿ ಕಾಂಗ್ರೆಸ್ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆ ಕೂಗಲಾರಂಭಿಸಿದರು. ಇದಕ್ಕೆ ಪ್ರತಿಯಾಗಿ  ಬಿಜೆಪಿ ಸದಸ್ಯರು ಸಿದ್ದರಾಮಯ್ಯ ಅವಧಿಯ ಭ್ರಷ್ಟಾಚಾರ ಹಾಗೂ ಡಿ.ಕೆ.ಶಿವಕುಮಾರ್ ಭ್ರಷ್ಟಾಚಾರದ ಬಗ್ಗೆ ಪೋಸ್ಟರ್ ಹಿಡಿದು ಅಣಕಿಸಿ ಧರಣಿ ನಡೆಸಿದರು.
ಬಿಜೆಪಿ ಸರ್ಕಾರದ ಕಮಿಷನ್ ವಿಚಾರವಾಗಿ ಸರ್ಕಾರದ ವಿರುದ್ಧ ಕೆಂಡ ಕಾರಿದ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಸರ್ಕಾರದ ಭ್ರಷ್ಟಾಚಾರ ಪ್ರಶ್ನಿಸಿದ್ದಕ್ಕೆ ನಮ್ಮ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಮೇಲೂ ಬರೆಯಬಹುದು. ಬಿಜೆಪಿಯವರು ಸಿದ್ದರಾಮಯ್ಯ ಅವರನ್ನು ನಿದ್ದೆ ರಾಮಯ್ಯ ಎಂದಾಗ ಯಾರನ್ನಾದರೂ ಬಂಧಿಸಿದ್ದರಾ? 10% ಕಮಿಷನ್ ಬಗ್ಗೆ ‘ವಿಶ್ವಗುರು’ ಹೇಳಿದಾಗ ಕ್ರಮ ಆಯ್ತಾ? ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿ.ಟಿ.ಲಲಿತಾನಾಯಕ್ ಹಾಗೂ ನನಗೆ ಬೆದರಿಕೆ ಪತ್ರ ಕಳುಹಿಸಿದರು. ಬೆದರಿಕೆ ಪತ್ರ ಬಂದಾಗ ಏನಾದ್ರೂ ಕ್ರಮ ಕೈಗೊಂಡಿದ್ದಾರಾ?  ಸರ್ಕಾರ ಇರೋದು ಬಿಜೆಪಿಗೆ ಮಾತ್ರನಾ​?​ ಅಲ್ಲಾ ಎಲ್ಲರಿಗೂ ಇದ್ಯಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಚೀಫ್ ಬಿ.ಆರ್.ನಾಯ್ಡು ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿದ್ದಾರೆ.  ಅವರ ಮೇಲೆ ಯಾವ ಕೇಸ್ ಇದೆ ಎಂದು ರಾತ್ರೋ ರಾತ್ರಿ ಮನೆಗೆ ಬಂದು ಬಂಧಿಸಿ ಕರೆದೊಯ್ದಿದ್ದಾರೆ? ಎಂದು ಪ್ರಶ್ನಿಸಿದರು. ಈ ವೇಳೆ ಬಿಜೆಪಿ ಸದಸ್ಯರು ಭ್ರ​ಷ್ಠ​ ಕಾಂಗ್ರೆಸ್ ಪಕ್ಷಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಲು ಆರಂಭಿಸಿದರು. ಕಾಂಗ್ರೆಸ್ ಸದಸ್ಯರು ಕೂಡ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಪರಿಷತ್ ನಲ್ಲಿ ಗದ್ದಲ ನಡೆಯುತ್ತಿದ್ದರೂ ಸಭಾಪತಿ ಮಲ್ಕಾಪೂರೆ  ಪ್ರಶ್ನೋತ್ತರ ಕಲಾಪ ನಡೆಸಿದರು. ಇಷ್ಟೆಲ್ಲ ಗದ್ದಲ-ಕೋಲಾಹಲ ನಡೆಯುತ್ತಿದರೂ ಸಭಾಪತಿಗಳು ಪ್ರಶ್ನೋತ್ತರ ಕಲಾಪ ನಡೆಸುತ್ತಿರುವುದನ್ನು ಕಂಡು ಆಕ್ರೋಶಗೊಂಡ ಬಿ.ಕೆ.ಹರಿಪ್ರಸಾದ್ ಸಭಾಪತಿಗಳ ವಿರುದ್ಧ ಘೋಷಣೆ ಕೂಗಿದರು.  ಮತ್ತೊಂದೆಡೆ  ಕಾಂಗ್ರೆಸ್ ಸದಸ್ಯರು ಪೋಸ್ಟರ್ ಗಳನ್ನು ಹಿಡಿದು ಸಭಾಪತಿಗಳ ಪೀಠಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಕಾಂಗ್ರೆಸ್ ನ ಪ್ರಕಾಶ್ ರಾಥೋಡ್, ಸದನದಲ್ಲಿದ್ದ ಕುರ್ಚಿ ಮೇಲೆ ಹತ್ತಿ ನಿಂತು ಸಭಾಪತಿಗಳ ವಿರುದ್ಧ ಹಾಗೂ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.  ಕಾಂಗ್ರೆಸ್ ನಡೆಗೆ ಬಿಜೆಪಿ ಸದಸ್ಯರು ಇನ್ನಷ್ಟು ಪ್ರತಿಭಟನೆ ತೀವ್ರಗೊಳಿಸಿದರು. ಪರಿಷತ್ ನಲ್ಲಿ ನಡೆದ ಆಡಳಿತ-ವಿಪಕ್ಷಗಳ ಹೈಡ್ರಾಮಾ ಕಂಡು ಸ್ಪೀಕರ್ ಮಲ್ಕಾಪೂರೆ ಕಲಾಪವನ್ನು ಮುಂದೂಡಿದರು.
ಇನ್ನೊಂದೆಡೆ ವಿಧಾನಸಭೆಯಲ್ಲಿಯೂ ಪೇಸಿಎಂ ಪೋಸ್ಟರ್ ವಿಚಾರ ಕೋಲಾಹಲಕ್ಕೆ ಕಾರಣವಾಯಿತು. ಬಿಜೆಪಿ ಸದಸ್ಯ​ ಪಿ.​ ರಾಜೀವ್, ಸಿಎಂ ಫೋಟೋ ಬಳಸಿ ಪೋಸ್ಟರ್ ಅಂಟಿಸಲು ಅಧಿಕಾರಕೊಟ್ಟವರು ಯಾರು? ಕಾನೂನಿನಲ್ಲಿ ಇದಕ್ಕೆ ಅವಕಾಶವಿಲ್ಲ. ಮುಖ್ಯಮಂತ್ರಿಗಳಿಗೆ ಅವಮಾನ ಮಾಡಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ರಾಜೀವ್ ಹೇಳಿಕೆಗೆ ಬಿಜೆಪಿ ಇತರ ಸದಸ್ಯರೂ ಧ್ವನಿಗೂಡಿಸುತ್ತಿದ್ದಂತೆ ಕಾಂಗ್ರೆಸ್ ಶಾಸಕ ಕೃಷ್ಣಬೈರೇಗೌಡ ನೀವೇನು ಕಾನೂನಾ? ತೊಂದರೆಯಾದ​ರೆ​ ಕಾನೂನು ಪ್ರಕಾರ ಕ್ರಮ ಕೈಗೊಳ್ಳಿ​,​ ಎದುರಿಸಲು ಸಿದ್ಧ ಅನಗತ್ಯವಾಗಿ ಹೇಳಿಕೆಗಳನ್ನು ನೀಡುವುದು ಬೇಡ​,​ ರಾಜ್ಯ ಸರ್ಕಾರದ  ಭ್ರಷ್ಟಾಚಾರ, ಲಂಚಾವತಾರ ಮಿತಿ ಮೀರಿದೆ​.​ ಜವಾಬ್ದಾರಿಯುತ ವಿಪಕ್ಷವಾಗಿ ನಡೆದುಕೊಂಡಿದ್ದೇವೆ ಎಂದು ವಾಗ್ದಾಳಿ ನಡೆಸಿದರು.
 ಒಟ್ಟಾರೆ ಇಂದು ಪೇಸಿಎಂ ಪೋಸ್ಟರ್ ಗದ್ದಲ ವಿಧಾನಮಂಡಲದ ಉಭಯ ಸದನಗಳಲ್ಲೂ ಗದ್ದಲ-ಕೋಲಾಹಲಕ್ಕೆ ಕಾರಣವಾಯಿತು.
ತಾಕತ್ತಿದ್ದರೆ ನಮ್ಮನ್ನೂ ಬಂಧಿಸಿ; ಸವಾಲು ಹಾಕಿದ ಸಿದ್ದರಾಮಯ್ಯ:
ಪೇಸಿಎಂ ಹಾಗೂ 40% ಸರ್ಕಾರ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದ ರಾಜ್ಯ ಬಿಜೆಪಿ ಸರ್ಕರದ ವಿರುದ್ಧ ಕಿಡಿಕಾರಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಕರ್ನಾಟಕದಲ್ಲಿ ಹೊಸ ಕಾನೂನು ಜಾರಿಯಾಗಿದೆ. ’ಇಲ್ಲಿ ಲಂಚ ತಿಂದರೆ ಅಪರಾಧ ಅಲ್ಲ, ಲಂಚ ತಿಂದದ್ದನ್ನು ಹೇಳಿದರೆ ಅಪರಾಧ’. ಪೊಲೀಸರ ಮೂಲಕ ಎಷ್ಟು ಜನರ ಬಾಯಿ ಮುಚ್ಚಿಸುತ್ತೀರಿ? ಎಷ್ಟು ಮಂದಿಯನ್ನು ಜೈಲಿಗೆ ಹಾಕ್ತೀರಿ? ರಾಜ್ಯದ ತುಂಬಾ ಜೈಲು ಕಟ್ಟಿಸ್ತಿರಾ? ಜನ ಸರ್ಕಾರದ ವಿರುದ್ಧ ಬಂಡೆದಿದ್ದಾರೆ, ಎಚ್ಚರ..! ಎಂದು  ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರದ ಲಂಚುಗುಳಿತನದ ಬಗ್ಗೆ ಪಕ್ಷದ ಕಾರ್ಯಕರ್ತರ ಜೊತೆ ನಾನೇ ಪೋಸ್ಟರ್ ಅಂಟಿಸುತ್ತೇನೆ, ತಾಕತ್ತಿದ್ದರೆ ನಮ್ಮನ್ನೂ ಬಂಧಿಸಿ. ನನ್ನ ಮತ್ತು ಡಿ.ಕೆ.ಶಿವಕುಮಾರ್ ಬಗ್ಗೆ ಪೋಸ್ಟರ್ ಅಂಟಿಸಿದ್ದರಲ್ಲಾ, ಅದರ ಬಗ್ಗೆ  ಸಿಎಂ ಬೊಮ್ಮಾಯಿ ಯಾಕೆ ಮೌನವಾಗಿದ್ದಾರೆ? ಪೊಲೀಸರ ಕಣ್ಣು ಯಾಕೆ  ಕುರುಡಾಗಿದೆ? ಎಂದು ಪ್ರಶ್ನಿಸಿದ್ದಾರೆ.
ನಾಳೆ  ನಮ್ಮ ಶಾಸಕರಿಂದ ಪೇಸಿಎಂ ಪೋಸ್ಟರ್ ಅಭಿಯಾನ ಎಂದ ಡಿ.ಕೆ.ಶಿ:
ರಾಜ್ಯಸರ್ಕಾರದ ವಿರುದ್ಧ ಕಿಡಿ ಕಾರಿರುವ ಕೆಪಿ​ಸಿ​ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್,  ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಿದ್ದು ಸರಿಯಲ್ಲ. ತಕ್ಷಣ ಅವರನ್ನು ಬಿಡುಗಡೆಗೊಳಿಸಬೇಕು. ಬಿಜೆಪಿಯವರೂ ನಮ್ಮ ವಿರುದ್ಧ ಪೋಸ್ಟರ್ ಹಾಕಿದ್ದಾರೆ ಯಾಕೆ ಬಿಬಿಎಂಪಿಯವರಿಗೆ, ಪೊಲೀಸರಿಗೆ ಬಿಜೆಪಿ ಮಾಡಿದ್ದು ಕಾಣಲಿಲ್ಲವೇ? ಎಂದು ಕೇಳಿದ್ದಾರೆ.
ಸಿಎಂ ಬೊಮ್ಮಾಯಿಯವರು ಯಾಕಿಷ್ಟು ತಲೆಕೆಡಿಸಿಕೊಂಡಿದ್ದಾರೆ?  ಅಧಿಕಾರದಲ್ಲಿರುವವರು ಇದನ್ನೆಲ್ಲ ಅರಗಿಸಿಕೊಳ್ಳಬೇಕು. ನಮ್ಮ ವಿರುದ್ಧವೂ ಬಿಜೆಪಿಯವರು ಏನೆಲ್ಲ ಮಾಡಿಲ್ಲವೇ?  ನಾಳೆ ನಮ್ಮ ಶಾಸಕರೆಲ್ಲರೂ ಪೇಸಿಎಂ ಪೋಸ್ಟರ್ ಆಂದೋಲನದಲ್ಲಿ ಭಾಗಿಯಾಗಿ ಪೋಸ್ಟರ್ ಅಂಟಿಸುತ್ತೇವೆ ಎಂದು ಗುಡುಗಿದ್ದಾರೆ.

ಹೇಗಿದೆ ನೋಡಿ ಕರ್ನಾಟಕದ ಹೊಸ ಕಾನೂನು, ಇಲ್ಲಿ ಲಂಚ ತಿಂದರೆ ಅಪರಾಧ ಅಲ್ಲ, ಲಂಚ ತಿಂದದ್ದನ್ನು ಹೇಳಿದರೆ ಅಪರಾಧ ಎಂದ ಸಿದ್ದರಾಮಯ್ಯ

Nivedita Navalgund
You cannot copy content of this page