Athani Takkennavar
Beereshwara13
GIT add4

ಮಕ್ಕಳಿಗಾಗಿ ವಿಶಿಷ್ಟ ಕನಸಿನ ಯೋಜನೆ ರೂಪಿಸಿದ ಶಾಸಕ ಅಭಯ ಪಾಟೀಲ

ಮಲ್ಟಿ ಡೈಮೆನ್ಯನ್ ಕಾಗ್ನಿಟೀವ್ ಕಿಡ್ಸ್ ಜೋನ್' ಲೋಕಾರ್ಪಣೆ

KLE1099 Add

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ನಗರದ ಶಹಾಪೂರದಲ್ಲಿರುವ ರವೀಂದ್ರ ಕೌಶಿಕ ಇ-ಗ್ರಂಥಾಲಯದ ಮೇಲ್ಮಹಡಿಯಲ್ಲಿ ಅಭಿವೃದ್ದಿಪಡಿಸಲಾದ ‘ಮಲ್ಟಿ ಡೈಮೆನ್ಯನ್ ಕಾಗ್ನಿಟೀವ್ ಕಿಡ್ಸ್ ಜೋನ್’ ಲೋಕಾರ್ಪಣೆಗೊಂಡಿತು.

ಉದ್ಘಾಟನೆ ಮಾಡಿ ಮಾತನಾಡಿದ ಸಂಸದರಾದ  ಮಂಗಲಾ ಸುರೇಶ ಅಂಗಡಿ ಅವರು ಶಾಸಕರಾದ ಅಭಯ ಪಾಟೀಲ ಅವರು ಮಕ್ಕಳಿಗಾಗಿಯೇ ಅವರ ಭವಿಷ್ಯದ ಶೈಕ್ಷಣಿಕ ಏಳ್ಗೆಗಾಗಿ ಮಕ್ಕಳ ಬಹುಮುಖ ಪ್ರತಿಭೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಕಿಡ್ಸ್ ಜೋನ್’ ಅನ್ನು ಅಭಿವೃದ್ದಿ ಪಡಿಸಲು ಕಾರಣೀಭೂತರಾಗಿದ್ದು ಸುಧಾರಿತ ತಂತ್ರಜ್ಞಾನದ ಮೂಲಕ ಮಕ್ಕಳ ಮನೋಸ್ಥೈರ್ಯ ಹೆಚ್ಚಿಸುವುದಲ್ಲದೇ ಅವರ ಜ್ಞಾನದ ಸಾಮರ್ಥ್ಯ ಅಳೆಯಬಲ್ಲ ಮತ್ತು ವಿಶ್ಲೇಷಿಸಬಹುದಾದ ವಿಶೇಷ ತಂತ್ರಜ್ಞಾನ ಹೊಂದಿದ ಕಿಡ್ ಜೋನ್ ಇದಾಗಿದ್ದು ನಗರದ ಮಕ್ಕಳು ಉಚಿತವಾಗಿ ಇದನ್ನು ಬಳಸಿಕೊಳ್ಳಬಹುದಾಗಿದೆ ಎಂದು ಸ್ಮಾರ್ಟ ಸಿಟಿ ಕಾರ್ಯವನ್ನು ಶ್ಲಾಘಿಸಿದರು.

ಈ ವೇಳೆ ಉಪಸ್ಥಿತರಿದ್ದ ಶಾಸಕ ಅಭಯ ಪಾಟೀಲ ಮಾತನಾಡಿ ಇದೊಂದು ಮಾದರಿ ಯೋಜನೆಯಾಗಿದ್ದು 3 ರಿಂದ 8 ವರ್ಷದೊಳಗಿನ ಮಕ್ಕಳು ಇಲ್ಲಿಗೆ ಬಂದು ಓದಲು ಮತ್ತು ಕಲಿಯಲು ಮಾತ್ರವಲ್ಲದೇ ಅವರ ಅರಿವಿನ ಕೌಶಲ್ಯಗಳಾದ ಶಬ್ದಕೋಶ ಗ್ರಹಿಕೆ, ತಾರ್ಕಿಕತೆ, ಸ್ಮರಣೆ, ಸಂವೇದನಾ ಕೌಶಲ್ಯ ಹಾಗೂ ಸಂಖ್ಯಾತ್ಮಕ ಕೌಶಲ್ಯ ಇತ್ಯಾದಿಗಳನ್ನು ಅಳೆಯಬಹುದು. ಅವರ ಮನೋಸ್ಥೈರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಈ ಕಿಡ್ಸ್ ಜೋನ್ ಪೂರಕವಾಗಿದ್ದು ಶಿಕ್ಷಣ ಸಂಸ್ಥೆಗಳು, ಮಕ್ಕಳ ಮನಶಾಸ್ತ್ರಜ್ಞರು ಈ ಸಾರ್ವಜನಿಕ ಸೌಲಭ್ಯಗಳನ್ನು ಉಚಿತವಾಗಿ ಬಳಸಿಕೊಳ್ಳುವಂತೆ ತಿಳಿಸಿದರು. ದೇಶದಲ್ಲಿ ಈ ಮಾದರಿ ಕಿಡ್ಸ್ ಜೋನ್ ಇದೇ ಮೊದಲು ಎಂಬ ಹೆಗ್ಗಳಿಕೆ ಬೆಳಗಾವಿಗೆ ದಕ್ಕಲಿದೆ ಇದೊಂದು ದೇಶಕ್ಕೆ ಮಾದರಿಯಾಗುವ ತಾಂತ್ರಿಕ ವೈಶಿಷ್ಟ್ಯತೆ ಹೊಂದಿದೆ ಎಂದು ಸ್ಮಾರ್ಟ ಸಿಟಿ ಕಾರ್ಯವನ್ನು ಶ್ಲಾಘಿಸಿದರು.

ವ್ಯಾಕ್ಸಿನ್ ಡಿಪೋದಲ್ಲಿ 5 ಸಾವಿರ ಸಸಿ ನೆಡುವ ಯೋಜನೆ:
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಸ್ಮಾರ್ಟ ಸಿಟಿ ಯೋಜನೆ ಆರಂಭಗೊಂಡು 7 ವರ್ಷ ಪೂರ್ಣಗೊಂಡ ಪ್ರಯುಕ್ತ ಕೇಂದ್ರ ಸರ್ಕಾರದ ನಿರ್ದೇಶನದನ್ವಯ ಬೆಳಗಾವಿ ಸ್ಮಾರ್ಟ ಸಿಟಿ ಯೋಜನೆಯಡಿ ಮುಂಜಾನೆ 8.30 ಕ್ಕೆ ನಗರದ ವ್ಯಾಕ್ಸಿನ್ ಡಿಪೋ ದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಅವರು ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು ವ್ಯಾಕ್ಸಿನ್ ಡಿಪೋ ದಲ್ಲಿ ಒಟ್ಟು ತರಹೇವಾರಿಯ ಐದು ಸಾವಿರ ಸಸಿಗಳನ್ನು ನೆಡುವ ಯೋಜನೆ ರೂಪಿಸಲಾಗಿದ್ದು ಬೆಳಗಾವಿ ಸಂಪೂರ್ಣ ಹಸಿರೀಕರಣ ಗೊಳಿಸಲು ಈ ಯೋಜನೆ ರೂಪಿಸಲಾಗಿದೆ ಶುದ್ದ ವಾತಾವರಣ ನಿಯಮಿತ ಮಳೆ ಹಿನ್ನೆಲೆಯಲ್ಲಿ ಬೆಳಗಾವಿ ಸ್ಮಾರ್ಟ ಸಿಟಿ ಕೈಗೊಂಡ ಈ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಸಂಸದರಾದ ಶ್ರೀಮತಿ ಮಂಗಲಾ ಸುರೇಶ ಅಂಗಡಿ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಸ್ಮಾರ್ಟ ಸಿಟಿ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರವೀಣ ಬಾಗೇವಾಡಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿ ಹಾಜರಿದ್ದರು.

ಕಮಾಂಡ್ ಕಂಟ್ರೋಲ್ ಸೆಂಟರ್ ಕಾರ್ಯವಿಧಾನದ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ
ಬೆಳಗಾವಿ ಸ್ಮಾರ್ಟ ಸಿಟಿ ಯೋಜನೆಯಡಿ ಅಭಿವೃದ್ದಿ ಪಡಿಸಲಾದ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ನ ಬಗ್ಗೆ
ನಗರದ ಸರ್ದಾರ ಪ್ರೌಢಶಾಲೆ ಹಾಗೂ ಜೈನ್ ಕಾಲೇಜ್ ಆಫ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಇದರ ಕಾರ್ಯ ನಿರ್ವಹಣೆ ಹಾಗೂ ಸಾರ್ವಜನಿಕರಿಗೆ ಇದರ ಉಪಯೋಗಗಳ ಬಗ್ಗೆ ತಿಳಿಸಿಕೊಡುವ ಕಾರ್ಯಕ್ರಮ ಜರುಗಿತು. ಭಾರತ ಎಲೆಕ್ಟ್ರಾನಿಕ್ ಲಿಮಿಟೆಡ್ ರವರು ಇದರ ಕಾರ್ಯನಿರ್ವಹಣೆ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು. ಸಂಸದರಾದ ಶ್ರೀಮತಿ ಮಂಗಲಾ ಸುರೇಶ ಅಂಗಡಿ ಹಾಗೂ ಬೆಳಗಾವಿ ಉತ್ತರ ಶಾಸಕ ಅನೀಲ ಬೆನಕೆ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ವಿದ್ಯಾರ್ಥಿಗಳಿಗೆ ಇದರ ಸದುಪಯೋಗ ಕುರಿತು ಸಲಹೆ ನೀಡಿದರು.

ಈ ವೇಳೆ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರವೀಣ ಬಾಗೇವಾಡಿ, ವಿಶ್ವೇಶ್ವರ ಬದರಗಡೆ, ಅಜಿತಕುಮಾರ ಪಾಟೀಲ, ಪಿ.ಎಂ ಪಾಟೀಲ ಶಿಕ್ಷಕರು ಹಾಗೂ ಉಪನ್ಯಾಸಕರು ಸೇರಿದಂತೆ ಸ್ಮಾರ್ಟ ಸಿಟಿ ಅಧಿಕಾರಿಗಳು ಸಿಬ್ಬಂದಿ ಹಾಜರಿದ್ದರು.

ಬೆಳಗಾವಿಯಲ್ಲೊಂದು ಅಪರೂಪದ ಮಲ್ಟಿ ಡೈಮೆನ್ಶನಲ್ ಕಾಗ್ನೆಟಿವ್ ಕಿಡ್ಸ್ ಝೋನ್: ಶಾಸಕ ಅಭಯ ಪಾಟೀಲ ಅವರ ಯೋಜನೆ; ಶನಿವಾರ ಲೋಕಾರ್ಪಣೆ

Nivedita Navalgund
You cannot copy content of this page