ಬರದ ನೆಲದ ಜನತೆಯ ಮೊರೆಗೆ ಸಿಕ್ಕಿತು ಫಲ; ಬತ್ತಿ ಬರಿದಾಗಿದ್ದ ಕೃಷ್ಣೆಯಲ್ಲಿ ಹರಿದು ಬರುತ್ತಿದೆ ಭರಪೂರ ಜಲ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬಿಸಿಲ ಬೇಗೆಗೆ ತತ್ತರಿಸಿದ ಬೆಳಗಾವಿ ಜಿಲ್ಲೆಯ ಕೃಷ್ಣಾ ನದಿ ತೀರದ ಜನರ ನೀರಿಗಾಗಿ ಮೊರೆ ಫಲಿಸಿದೆ. ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಮಳೆಯಾಗುತ್ತಿರುವುದರಿಂದ ಬತ್ತಿ ಬರಡಾಗಿದ್ದ ಕೃಷ್ಣೆಯ ಒಡಲು ಭರಿಸತೊಡಗಿದೆ. ಇಂದು ಬೆಳಗ್ಗೆ 6ರ ಸುಮಾರಿಗೆ ಕೃಷ್ಣಾ ನದಿಯಲ್ಲಿ ವ್ಯಾಪಕ ಪ್ರಮಾಣದಲ್ಲಿ ನೀರು ಉಗಾರದ ಬಾಂದಾರದವರೆಗೂ ಹರಿದು ಬಂದಿದ್ದು, ಈ ಭಾಗದ ಜನರ ಜಲದಾಹ ಹಿಂಗಿಸುವ ಆಶಾದಾಯಕ ಬೆಳವಣಿಗೆ ಸಮಾಧಾನ ಮೂಡಿಸಿದೆ. ಸದ್ಯ ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್ ನಿಂದ 2 ಸಾವಿರ ಕ್ಯೂಸೆಕ್ ನೀರು … Continue reading ಬರದ ನೆಲದ ಜನತೆಯ ಮೊರೆಗೆ ಸಿಕ್ಕಿತು ಫಲ; ಬತ್ತಿ ಬರಿದಾಗಿದ್ದ ಕೃಷ್ಣೆಯಲ್ಲಿ ಹರಿದು ಬರುತ್ತಿದೆ ಭರಪೂರ ಜಲ