*ಭಾಷಣ ಮಾಡುತ್ತಿದ್ದಾಗಲೇ ವೇದಿಕೆಯಲ್ಲಿ ಕುಸಿದು ಬಿದ್ದ ಸಚಿವರು*

ಪ್ರಗತಿವಾಹಿನಿ ಸುದ್ದಿ: ಗಣರಾಜ್ಯೋತ್ಸವದ ಭಾಷಣ ಮಾಡುತ್ತಿದ್ದಾಗಲೇ ಸಚಿವರೊಬ್ಬರು ವೇದಿಕೆಯಲ್ಲಿ ಕುಸಿದು ಬಿದ್ದ ಘಟನೆ ನಡೆದಿದೆ. ಕೇರಳದ ಕಣ್ಣೂರಿನಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಸಚಿವ ರಾಮಚಂದ್ರನ್ ಕಡನಪಲ್ಲಿ ಧ್ವಜಾರೋಹಣದ ಬಳಿಕ ವೇದಿಕೆಯಲ್ಲಿ ಭಾಷಣ ಮಾಡುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಭಾಷಣ ಮಾಡುತ್ತಿದ್ದಾಗಲೇ ಹಿಮ್ಮುಖರಾಗಿ ಸಚಿವರು ಬೀಳುತ್ತಿದ್ದಂತೆ ಭದ್ರತಾ ಸಿಬ್ಬಂದಿ ಅವರನ್ನು ಹಿಡಿದುಕೊಂಡಿದ್ದಾರೆ. ತಕ್ಷಣ ಸಚಿವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. Home add -Advt *ಮನರೇಗಾ ಉಳಿಸಲು ನಾಳೆ ರಾಜಭವನ ಚಲೋ: ಪ್ರತಿ ತಾಲ್ಲೂಕಿನಲ್ಲೂ … Continue reading *ಭಾಷಣ ಮಾಡುತ್ತಿದ್ದಾಗಲೇ ವೇದಿಕೆಯಲ್ಲಿ ಕುಸಿದು ಬಿದ್ದ ಸಚಿವರು*