ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ರಮೇಶ ಜಾರಕಿಹೊಳಿ ಟೀಮ್ ಸಮಾವೇಶ; ಡಬಲ್ ಗಿಫ್ಟ್ ಕೊಡ್ತಾರಾ ಮಾಜಿ ಸಚಿವ?

ನಾವಂತೂ ಕಳೆದ ಎರಡು ತಿಂಗಳಿಂದ ಚುನಾವಣೆ ತಯಾರಿ ಮಾಡುತ್ತಿದ್ದೇವೆ. ಮಂತ್ರಿ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ, ಮಂತ್ರಿ ಮಾಡುತ್ತಾರೋ  ಇಲ್ಲವೋ ಸಿಎಂಗೆ, ವರಿಷ್ಠರಿಗೆ ಬಿಟ್ಟ ವಿಷಯ. ವರಿಷ್ಠರು ಏನು ಆದೇಶ ಕೊಡುತ್ತಾರೋ ಅದರ ಪ್ರಕಾರ ಕೆಲಸ ಮಾಡುತ್ತೇನೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.