*ಶಬರಿಮಲೆಯಲ್ಲಿ ಮಹಾ ವಿಸ್ಮಯ ಕಣ್ತುಂಬಿಕೊಂಡ ಭಕ್ತರು*

ಪ್ರಗತಿವಾಹಿನಿ ಸುದ್ದಿ: ಹಿಂದೂಗಳ ಪವಿತ್ರ ಶ್ರದ್ಧಾ ಕೇಂದ್ರ ಕೇರಳದ ಶ್ರೀ ಕ್ಷೇತ್ರ ಶಬರಿಮಲೆಯಲ್ಲಿ ಮಕರ ಜ್ಯೋತಿ ರೂಪದಲ್ಲಿ ಅಯ್ಯಪ್ಪಸ್ವಾಮಿ ದರ್ಶನ ನೀಡಿದ್ದು, ಲಕ್ಷಾಂತರ ಭಕ್ತರು ಮಹಾ ವಿಸ್ಮಯವನ್ನು ಕಣ್ತುಂಬಿಕೊಂಡು ಪುನೀತರಾಗಿದ್ದಾರೆ. ಮಕರ ಸಂಕ್ರಮಣದ ದಿನದಂದು ಶಬರಿಮಲೆಯಲ್ಲಿ ಅಯ್ಯಪ್ಪಸ್ವಾಮಿ, ಪೊನ್ನಂಬಲಮೇಡು ಬೆಟ್ಟದಲ್ಲಿ ಜ್ಯೋತಿ ಸ್ವರೂಪದಲ್ಲಿ ದರ್ಶನ ನೀಡುತ್ತಾನೆ ಎಂಬುದು ನಂಬಿಕೆ. ಈ ಅದ್ಭುತ ಕ್ಷಣಗಳನ್ನು ನೋಡಲೆಂದೇ ಅಯ್ಯಪ್ಪ ಭಕ್ತರು ಹಲವು ದಿನಗಳ ಕಾಲ ಕಠಿಣ ವ್ರತಾಚರಣೆಗಳನ್ನು ಮಾಡಿ ಮಾಲಾಧಾರಿಗಳಾಗಿ ದೇಶದ ಮೂಲೆ ಮೂಲೆಗಳಿಂದ ಬಂದು ಶಬರಿಮಲೆ ಬೆಟ್ಟ ಹತ್ತುತ್ತಾರೆ. … Continue reading *ಶಬರಿಮಲೆಯಲ್ಲಿ ಮಹಾ ವಿಸ್ಮಯ ಕಣ್ತುಂಬಿಕೊಂಡ ಭಕ್ತರು*