*ಕೃತಕ ಗರ್ಭಧಾರಣೆಯ ವೆಚ್ಚ ರೂ.5 ಸಾವಿರದಿಂದ ರೂ.70 ಸಾವಿರ ಮಾತ್ರ; ಸಚಿವೆ ಶಶಿಕಲಾ ಜೊಲ್ಲೆ*

‘ಜಗತ್ತು ಬದಲಾಗುತ್ತಿದೆ. ನಾವೂ ಸಹ ಬದಲಾಗೋಣ, ಆದರೆ ನಮ್ಮ ಧರ್ಮ ಮತ್ತು ಸಂಸ್ಕಾರ ಉಳಿಸಿ ಬೆಳೆಸುತ್ತ ಬದಲಾಗೋಣ. ಇಂದಿನ ಆಧುನಿಕ ತಂತ್ರಜ್ಞಾನದ, ಕಂಪ್ಯೂಟರ್ ಯುಗದಲ್ಲಿ ತಿಂಡಿ. ತಿನಿಸು, ಊಟದಲ್ಲಿ ಬದಲಾವಣೆ, ವಾಯುಮಾಲಿನ್ಯ, ಮೊದಲಾದ ಅನೇಕ ಕಾರಣಗಳಿಂದ ನೈಸರ್ಗಿಕ ಹೆರಿಗೆ ಪ್ರಮಾಣ ಬಹಳಷ್ಟು ಕಡಿಮೆಯಾಗಿದೆ’ ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಕಳವಳ ವ್ಯಕ್ತಪಡಿಸಿದರು.