*ತಲೆ ಒಡೆದ ರೀತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ*

ಪ್ರಗತಿವಾಹಿನಿ ಸುದ್ದಿ; ಶಿರಸಿ: ಅಪರಿಚಿತ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ವಡ್ಡಿನಕೊಪ್ಪ ಅರಣ್ಯ ಪ್ರದೇಶದಲ್ಲಿ ಶವ ಪತ್ತೆಯಾಗಿದೆ. ಕೊರ್ಲಾಕಟ್ಟಾ ಮಾಳಂಜಿ ರಸ್ತೆಯ ವಡ್ಡಿನಕೊಪ್ಪ ಅರಣ್ಯ ಪ್ರದೇಶದಲ್ಲಿ ಸುಮಾರು 50ರಿಂದ 55 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ತಲೆ ಒಡೆದು ಕೊಲೆಗೈಯ್ಯಲಾಗಿದ್ದು, ದೇಹದ ಮೇಲೆ ಎರಡು ಗೋಣಿಚೀಲ ಹಾಕಿ ಸೊಪ್ಪಿನಿಂದ ಮುಚ್ಚಲಾಗಿದೆ. ದುಷ್ಕರ್ಮಿಗಳು ಮೃತದೇಹವನ್ನು ರಸ್ತೆಯ ಪಕ್ಕದಿಂದ ಎಳೆದುತಂದು ಕಾಡಿನಲ್ಲಿ ಎಸೆದು ಹೋಗಿದ್ದಾರೆ. ಮೃತದೇಹದ ಎಡಗಾಲಿನ ಎರಡನೇ ಬೆರಳಿಗೆ … Continue reading *ತಲೆ ಒಡೆದ ರೀತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ*