*ಭಾರಿ ಹಿಮಪಾತ ದುರಂತ: ನಾಲ್ವರು ಸಾವು*

ಪ್ರಗತಿವಾಹಿನಿ ಸುದ್ದಿ: ಉತ್ತರಾಖಂಡದಲ್ಲಿ ಭಾರಿ ಹಿಮಪಾತದಿಂದ ಹಿಮ ಪರ್ವತ ಕುಸಿದು ಹಿಮದ ಅಡಿಯಲ್ಲಿ ಸಿಲುಕಿದ್ದ ನಾಲ್ವರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ನಡೆದಿದೆ. ಉತ್ತರಾಖಂಡದ ಚಮೋಲಿ ಬಳಿ ಹೆದ್ದಾರಿ ಕಾರ್ಮಗಾರಿ ವೇಳೆ ನಿನ್ನೆ ಹಿಮ ಕುಸಿತವಾಗಿದ್ದು, ಹಿಮದ ಅಡಿಯಲ್ಲಿ 55 ಕಾರ್ಮಿಕರು ಸಿಲುಕಿಕೊಂಡಿದ್ದರು. 50 ಕಾರ್ಮಿಕರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೋಶಿಮಠದ ಬಳಿಯ ಸೇನಾ ಆಸ್ಪತ್ರೆಗೆ ದಾಖಲಾಗಿದ್ದ ನಾಲ್ವರು ಕಾರ್ಮಿಕರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಇನ್ನೂ ಐವರು ಕಾರ್ಮಿಕರು ಹಿಮದ ಅಡಿ ಸಿಲುಕಿದ್ದು, ಅವರಿಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. … Continue reading *ಭಾರಿ ಹಿಮಪಾತ ದುರಂತ: ನಾಲ್ವರು ಸಾವು*