*9ನೇ ತರಗತಿ ವಿದ್ಯಾರ್ಥಿಗೆ ಪಿವಿಸಿ ಪೈಪ್ ನಿಂದ ಬಾಸುಂಡೆ ಬರುವಂತೆ ಹೊಡೆತ: ಪ್ರಾಂಶುಪಾಲ, ಶಿಕ್ಷಕಿ ವಿರುದ್ಧ FIR ದಾಖಲು*

ಪ್ರಗತಿವಾಹಿನಿ ಸುದ್ದಿ: 9ನೇ ತರಗತಿ ವಿದ್ಯಾರ್ಥಿಗೆ ಶಾಲೆಯ ಶಿಕ್ಷಕಿ ಹಾಗೂ ಪ್ರಾಂಶುಪಾಲರು ಪಿವಿಸಿ ಪೈಪ್ ನಲ್ಲಿ ಬಾಸುಂಡೆ ಬರುವಂತೆ ಹೊಡೆದಿರುವ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಸುಂಕದಕಟ್ಟೆ ಬಳಿ ಇರುವ ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿ ಎರಡು ದಿನ ಶಾಲೆಗೆ ಗೈರಾಗಿದ್ದಕ್ಕೆ ಮಾರನೆ ದಿನ ಶಾಲೆಗೆ ಬಂದ ವಿದ್ಯಾರ್ಥಿ ಮೇಲೆ ಶಿಕ್ಷಕಿ ಹಾಗೂ ಪ್ರಾಂಶುಪಾಲರು ಮನಬಂದಂತೆ ಹೊಡೆದಿದ್ದಾರೆ. ಪಿವಿಸಿ ಪೈಪ್ ನಿಂದ ಹೊಡೆದಿದ್ದು, ವಿದ್ಯಾರ್ಥಿ ಮೈಮೇಲೆ ಬಾಸುಂಡೆಗಳು ಬಂದಿದ್ದು, ಆತನ ಸ್ಥಿತಿ ಗಂಭೀರವಾಗಿದೆ. ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. … Continue reading *9ನೇ ತರಗತಿ ವಿದ್ಯಾರ್ಥಿಗೆ ಪಿವಿಸಿ ಪೈಪ್ ನಿಂದ ಬಾಸುಂಡೆ ಬರುವಂತೆ ಹೊಡೆತ: ಪ್ರಾಂಶುಪಾಲ, ಶಿಕ್ಷಕಿ ವಿರುದ್ಧ FIR ದಾಖಲು*