*BREAKING: ಜಲಪಾತ ನೋಡಲು ಹೋಗಿದ್ದಾಗ ದುರಂತ: ಕಾಲು ಜಾರಿ ಫಾಲ್ಸ್ ಗೆ ಬಿದ್ದು ಬೆಳಗಾವಿಯ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು*

ಪ್ರಗತಿವಾಹಿನಿ ಸುದ್ದಿ: ಐವರು ಸ್ನೇಹಿತರೊಂದಿಗೆ ಚಿಕ್ಕಮಗಳೂರಿನ ಕಾಮೇನಹಳ್ಳಿ ಜಲಪಾತ ವೀಕ್ಷಣೆಗೆ ಹೋಗಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಕಾಲು ಜಾರಿ ಫಾಲ್ಸ್ ಗೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ವರುಣ್ (17) ಮೃತ ವಿದ್ಯಾರ್ಥಿ. ಬೆಳಗಾವಿಯಿಂದ ಐವರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಕಾಮೇನಹಳ್ಳಿ ಜಲಪಾತಕ್ಕೆ ಬಂದಿದ್ದರು. ಜಲಪಾತ ನೋಡಲು ಬಂಡೆ ಮೇಲೆ ನಿಂತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಂಡೆಮೇಲಿಂದ ಜಲಪಾತಕ್ಕೆ ಬಿದ್ದಿದ್ದು, ನೀರಿನಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದ್ದಾನೆ. ಘಟನ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ.Home add -Advt *BREAKING: ಸ್ಯಾಂಡಲ್ ವುಡ್ … Continue reading *BREAKING: ಜಲಪಾತ ನೋಡಲು ಹೋಗಿದ್ದಾಗ ದುರಂತ: ಕಾಲು ಜಾರಿ ಫಾಲ್ಸ್ ಗೆ ಬಿದ್ದು ಬೆಳಗಾವಿಯ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು*