*ಬೋರಗಾಂವ್ ಹೆಸ್ಕಾಂ ಕಚೇರಿಗೆ ಸೈಯದ್ ಅಜೀಮ್‌ಪೀರ್ ಎಸ್ ಖಾದ್ರಿ ಭೇಟಿ: ಹಾಜರಾತಿ ಪುಸ್ತಕ ಪರಿಶೀಲನೆ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸರ್ಕಾರದ ಗ್ಯಾರಂಟಿ ಯೋಜನೆಯಲ್ಲಿ ಒಂದಾಗಿರುವ ʼಗೃಹಜ್ಯೋತಿʼಯನ್ನು ಜನರಿಗೆ ತಲುಪಿಸಲು ಹೆಚ್ಚಿನ ನಿಗಾ ವಹಿಸಿ ಕಾರ್ಯನಿರ್ವಹಿಸುವಂತೆ ಹೆಸ್ಕಾಂ ಅಧ್ಯಕ್ಷರಾದ ಸೈಯದ್ ಅಜೀಮ್‌ಪೀರ್ ಎಸ್. ಖಾದ್ರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜಿಲ್ಲೆಯ ಗಡಿ ತಾಲೂಕು ನಿಪ್ಪಾಣಿಯ ಬೋರಗಾಂವ್ ನಲ್ಲಿರುವ ಹೆಸ್ಕಾಂನ ಕಚೇರಿಗೆ ಭೇಟಿ ನೀಡಿದ ಅವರು, ಅಧಿಕಾರಿಗಳು, ಸಿಬ್ಬಂದಿಯ ಹಾಜರಾತಿ ಪುಸ್ತಕ ಪರಿಶೀಲಿಸಿದರು. ಸಮಯಕ್ಕೆ ಸರಿಯಾಗಿ ಕಚೇರಿಗೆ ಆಗಮಿಸುವಂತೆ ತಿಳಿಸಿದರು. ಗೃಹಜ್ಯೋತಿ ಯೋಜನೆಯಿಂದ ಹೊರಗುಳಿದಿರುವ ಕುಟುಂಬಗಳನ್ನು ಗುರುತಿಸಿ ಅವರಿಗೂ ಯೋಜನೆಯ ಸೌಲಭ್ಯ ತಲುಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ಗ್ರಾಹಕರು, … Continue reading *ಬೋರಗಾಂವ್ ಹೆಸ್ಕಾಂ ಕಚೇರಿಗೆ ಸೈಯದ್ ಅಜೀಮ್‌ಪೀರ್ ಎಸ್ ಖಾದ್ರಿ ಭೇಟಿ: ಹಾಜರಾತಿ ಪುಸ್ತಕ ಪರಿಶೀಲನೆ*
Copy and paste this URL into your WordPress site to embed
Copy and paste this code into your site to embed