*ಡ್ಯಾನ್ಸ್ ಗೆ ಹೆಜ್ಜೆ ಹಾಕುತ್ತಾ ಕುಸಿದು ಬಿದ್ದ ಶಿಕ್ಷಕ ಹೃದಯಾಘಾತದಿಂದ ಸಾವು*

ಪ್ರಗತಿವಾಹಿನಿ ಸುದ್ದಿ: ಇತ್ತೀಚಿನ ದಿನಗಳಲ್ಲಿ ಏಕಾಏಕಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಇಲ್ಲೋರ್ವ ಶಿಕ್ಷಕ ಕಾರ್ಯಕ್ರಮವೊಂದರಲ್ಲಿ ಡಾನ್ಸ್ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ರಾಜಸ್ಥಾನದ ಜೈಪುರದಲ್ಲಿ ಈ ದುರಂತ ಸಂಭವಿಸಿದೆ. ಸಮಾರಂಭವೊಂದರಲ್ಲಿ ಶಿಕ್ಷಕ ತೃತೀಯಲಿಂಗಿ ಜೊತೆ ನೃತ್ಯಕ್ಕೆ ಹೆಜ್ಜೆ ಹಾಕುತ್ತಿದ್ದ ಶಿಕ್ಷಕ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಮೇಲೇಳಲು ಸಾಧ್ಯವಾಗದೇ ಸ್ಥಳದಲ್ಲೇ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಮೃತ ಶಿಕ್ಷಕನನ್ನು ಮನ್ನ ರಾಮ್ ಜಖರ್ ಎಂದು ಗುರುತಿಸಲಾಗಿದೆ. ಶಿಕ್ಷಕರ ನಿವೃತಿ ಸಮಾರಂಭವೇರ್ಪಡಿಸಲಾಗಿತ್ತು. ಈ ವೇಳೆ ನೃತ್ಯ ತಂಡಗಳನ್ನು ಕರೆಸಿ … Continue reading *ಡ್ಯಾನ್ಸ್ ಗೆ ಹೆಜ್ಜೆ ಹಾಕುತ್ತಾ ಕುಸಿದು ಬಿದ್ದ ಶಿಕ್ಷಕ ಹೃದಯಾಘಾತದಿಂದ ಸಾವು*