*ದೇವಸ್ಥಾನದ ಬಾಗಿಲು ಮುರಿದು ಚಿನ್ನಾಭರಣ ಕದ್ದು ಪರಾರಿಯಾದ ಕಳ್ಳರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ದೇವಸ್ಥಾನದ ಬಾಗಿಲು ಮುರಿದ ಕಳ್ಳರು ದೇವಸ್ಥಾನದಲ್ಲಿದ್ದ ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಧುಪದಾಳ ಗ್ರಾಮದ ಭೀರೇಶ್ವರ ದೇವಸ್ಥಾನ ಬಾಗಿಲು ಮುರಿದು 2 ಕಿಜಿಯ ಬೆಳ್ಳಿಯ ಕುದುರೆ‌, ಎರಡು ಚಿನ್ನದ ಸರ ಕಳ್ಳತನ ಮಾಡಿ ಜೊತೆಗೆ ಬೀರೇಶ್ವರ ಮೂರ್ತಿ ಹೊತ್ತೊಯ್ದಿದ್ದಾರೆ. Home add -Advt ಭೀರೇಶ್ವರ ದೇವರ ಖಂಚಿನ ಮೂರ್ತಿ ಎಂದು ತಿಳಿದ ಕಳ್ಳರು ಗ್ರಾಮದ ಹೊರವಲಯದಲ್ಲಿ ಎಸೆದು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಸವದತ್ತಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದರು.‌ … Continue reading *ದೇವಸ್ಥಾನದ ಬಾಗಿಲು ಮುರಿದು ಚಿನ್ನಾಭರಣ ಕದ್ದು ಪರಾರಿಯಾದ ಕಳ್ಳರು*