*ಸಮಾವೇಶ ಮುಗಿಸಿ ಮರಳುತ್ತಿದ್ದ ಬಸ್ಸಿಗೆ ಟ್ಯಾಂಕರ್ ಡಿಕ್ಕಿ*: *ಹಲವರಿಗೆ ಗಾಯ*

ಪ್ರಗತಿವಾಹಿನಿ ಸುದ್ದಿ: ಕಾಂಗ್ರೆಸ್ ಗ್ಯಾರಂಟಿ ಸಮಾವೇಶ ಮುಗಿಸಿ ಊರಿಗೆ ಮರಳುತ್ತಿದ್ದ ಪ್ರಯಾಣಿಕರಿಗೆ ಮಾರ್ಗಮಧ್ಯೆಯೇ ಆಘಾತ ಎದುರಾಗಿದೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪ್ರವಾಸಿ ಬಸ್ಸೊಂದು ಅಪಘಾತಕ್ಕೀಡಾಗಿದೆ. ಎರಡು ಬುಲೆಟ್ ಟ್ಯಾಂಕರ್‌ಗಳ ಪೈಕಿ ಒಂದು ಟ್ಯಾಂಕರ್ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದೆ. ಬಸ್ಸಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ. ಆದರೆ, ಬಸ್ಸಿನಲ್ಲಿದ್ದ 30 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕುಂದಾಪುರ ಸಮೀಪದ ಆನೆಗುಡ್ಡೆ ಗೋಪುರದ ಬಳಿ ಈ ಘಟನೆ ನಡೆದಿದೆ. ತ್ರಾಸಿಯಿಂದ ಸುಮಾರು … Continue reading *ಸಮಾವೇಶ ಮುಗಿಸಿ ಮರಳುತ್ತಿದ್ದ ಬಸ್ಸಿಗೆ ಟ್ಯಾಂಕರ್ ಡಿಕ್ಕಿ*: *ಹಲವರಿಗೆ ಗಾಯ*