*ಆಸ್ಪತ್ರೆಯ NICU ನಲ್ಲಿ ಎಸಿ ಸ್ಫೋಟ: ಇಬ್ಬರು ಹಸುಗೂಸುಗಳು ಬಲಿ*

ಪ್ರಗತಿವಾಹಿನಿ ಸುದ್ದಿ: RIMS ಆಸ್ಪತ್ರೆಯಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡಕ್ಕೆ ಇಬ್ಬರು ನವಜಾತ ಶಿಶುಗಳು ಬಲಿಯಾಗಿರುವ ಘಟನೆ ತೆಲಂಗಾಣದ ಆದಿಲಾಬಾದ್‌‌ನಲ್ಲಿ ನಡೆದಿದೆ. ಆಸ್ಪತ್ರೆಯ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ (NICU/SNCU) ಈ ಘಟನೆ ನಡೆದಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಶಾರ್ಟ್ ಸರ್ಕ್ಯೂಟ್‌ನಿಂದ ಎಸಿ ಯುನಿಟ್ ಸ್ಫೋಟಗೊಂಡಿದ್ದು, ಬಳಿಕ ವಾರ್ಡ್‌ನಲ್ಲಿ ಬೆಂಕಿ ಹಾಗೂ ದಟ್ಟ ಹೊಗೆ ಆವರಿಸಿಕೊಂಡಿದೆ.  ಘಟನೆಯ ವೇಳೆ 27ಕ್ಕೂ ಹೆಚ್ಚು ನವಜಾತ ಶಿಶುಗಳು ಚಿಕಿತ್ಸೆ ಪಡೆಯುತ್ತಿದ್ದರು. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಆಸ್ಪತ್ರೆ ಸಿಬ್ಬಂದಿ ವಿದ್ಯುತ್ ಸಂಪರ್ಕ … Continue reading *ಆಸ್ಪತ್ರೆಯ NICU ನಲ್ಲಿ ಎಸಿ ಸ್ಫೋಟ: ಇಬ್ಬರು ಹಸುಗೂಸುಗಳು ಬಲಿ*